ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಈ ಬಾರಿ ತ್ರಿಕೋನ ಸ್ಪಧ-ಎಂ.ವಿ. ಗೋವಿಂದನ್
ಕಣ್ಣೂರು: ಮುಂದಿನ ಲೋಕಸಭಾ ಚುನಾವಣೆಯ ಕೇರಳದಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಹೇಳಿದ್ದಾರೆ.
ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಈಬಾರಿ ತ್ರಿಕೋನ ಸ್ಪಧೆ ನಡೆಯಲಿದೆಯೆಂದೂ ಅದರಲ್ಲಿ ಎಲ್ಲಾ ೨೦ ಲೋಕಸಭಾ ಕ್ಷೇತ್ರಗಳಲ್ಲಿ ಎಡರಂಗವೇ ಗೆಲುವು ಸಾಧಿಸಲಿದೆಯೆಂಬ ನಿರೀಕ್ಷೆಯನ್ನು ಗೋವಿಂದನ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಲೋಕಸಭಾ ಚುನಾವಣೆ ನಡೆದ ವೇಳಗಳಲ್ಲೆಲ್ಲಾ ಎಡರಂಗ ಮತ್ತು ಐಕ್ಯರಂಗದ ನಡುವೆ ಮಾತ್ರವೇ ನೇರ ಸ್ಪರ್ಧೆ ನಡೆಯಲಿದೆಯೆಂದು ಎಡರಂಗ ಮತ್ತು ಐಕ್ಯರಂಗ ಹೇಳುತ್ತಾ ಬಂದಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಕೇರಳದಲ್ಲಿ ತ್ರಿಕೋನ ಸ್ಪಧೆ ಏರ್ಪಡಿಸಲಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಗೋವಿಂದನ್ ಅವರು ಹೌದು ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಆ ಮೂಲಕ ಕೇರಳದ ಬಿಜೆಪಿ ನೇತೃತ್ವದ ಎನ್‌ಡಿಎ ಈ ಚುನಾವಣೆಯಲ್ಲಿ ಎಡರಂಗ ಮತ್ತು ಐಕ್ಯರಂಗಕ್ಕೆ ಪ್ರಬಲ ಪೈಪೋಟಿ ನೀಡಲಿದೆಂಬ ಪರೋಕ್ಷ ಸೂಚನೆಯನ್ನು ಅವರು ಈ ಮೂಲಕ ನೀಡಿದಂತಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ವಿಪಕ್ಷಗಳು ಒಳಗೊಂಡ ಇಂಡಿಯಾ ಒಕ್ಕೂಟದ ಬಗ್ಗೆ ಪ್ರಶ್ನಿಸಿದಾಗ ಅದರ ಅಗತ್ಯ ಕೇರಳದಲ್ಲಿ ಇಲ್ಲವೆಂದೂ ಅವರು ಅದಕ್ಕೆ ಉತ್ತರ ನೀಡಿದರು.