ವಕ್ಫ್ ಆಸ್ತಿಗಳ ನೋಂದಣಿಗೆ ಕೇಂದ್ರ ಸರಕಾರದಿಂದ ‘ಉಮೀದ್’ ಪೋರ್ಟಲ್

ನವದೆಹಲಿ: ವಕ್ಫ್ ಆಸ್ತಿಗಳ ನೋಂ ದಾವಣೆಗೆ ಕೇಂದ್ರ ಸರಕಾರ ಉಮೀದ್ ಎಂಬ ಹೆಸರಲ್ಲಿ ಪೋರ್ಟಲ್ ಆರಂಭಿಸಿದೆ. ಜೂನ್ ೬ರಿಂದ ಇದು ವಿದ್ಯುಕ್ತವಾಗಿ ಕಾರ್ಯಾರಂಭಗೊಳ್ಳಲಿದೆ.

ವಕ್ಪ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಉದ್ದೇಶದಿಂದ  ಕೇಂದ್ರಸರಕಾರ ಈ ಪೋರ್ಟಲ್‌ಗೆ ರೂಪು ನೀಡಿದ್ದು, ಆ ಮೂಲಕ ವಕ್ಫ್ ಕಾಯ್ದೆಯನ್ನು ಮುನ್ನಡೆಸಲು ಸಜ್ಜಾಗಿದೆ.

ವಕ್ಪ್ ಆಸ್ತಿಗಳ ನೋಂದಾವಣೆ ಯನ್ನು ಸುಗಮಗೊಳಿಸುವ ಗುರಿಯನ್ನು ಈ ಪೋರ್ಟಲ್ ಹೊಂದಿದೆ. ಇದನ್ನು ಆರು ತಿಂಗಳೊ ಳಗಾಗಿ ಪೂರ್ಣಗೊಳಿಸಬೇಕೆಂಬ ನಿರ್ದೇಶವನ್ನು ಕೇಂದ್ರ ಸರಕಾರ ನೀಡಿದೆ.  ಮಹಿಳೆಯರ ಹೆಸರಲ್ಲಿರುವ ಆಸ್ತಿಗಳನ್ನು ವಕ್ಫ್ ಎಂದು ಘೋಷಿಸಲಾಗುವುದಿಲ್ಲ ಮತ್ತು ವಕ್ಪ್ ಆಸ್ತಿಗಳ ಫಲಾನುಭವಿಗಳು ಪ್ರಾಥಮಿಕವಾಗಿ  ಮಹಿಳೆಯರು, ಮಕ್ಕಳು ಮತ್ತು ಬಡವರಾಗಿರಬೇಕು. ನೋಂದಣಿಗೆ ಆಯಾಮಗಳು ಮತ್ತು ಜಿಯೋ ಟ್ಯಾಗ್ ಮೊದಲಾದ ಸ್ಥಳಗಳು ಸೇರಿದಂತೆ  ಆಸ್ತಿಗಳ ವಿವರಣೆಗಳು ಅಗತ್ಯವಿದೆಯೆಂದು ಕೇಂದ್ರ ಸರಕಾರ ಹೇಳಿದೆ.

ರಾಜ್ಯ ವಕ್ಫ್ ಮಂಡಳಿಯ ನೋಂದಾವಣೆ  ಪ್ರಕ್ರಿಯೆಗಳನ್ನು ನೋಡಿ ಕೊಳ್ಳಬೇಕು. ನಿಗದಿತ ಸಮಯದೊಳ ಗಾಗಿ  ನೋಂದಾಯಿಸದ ಆಸ್ತಿಗಳನ್ನು ವಿವಾದಿತವೆಂದು ಪರಿಗಣಿಸಲಾಗುವುದು ಮತ್ತು ಅದನ್ನು ನ್ಯಾಯಮಂಡಳಿಯ ಪರಿಗಣನೆಗೆ ಬಿಡಲಾಗುವುದೆಂದೂ ಕೇಂದ್ರ ಸರಕಾರ ತಿಳಿಸಿದೆ.

ವಕ್ಫ್ (ತಿದ್ದುಪಡಿ) ಮಸೂದೆ 2025 ತೀವ್ರ ಚರ್ಚೆಯ ನಂತರ ಸಂಸತ್ತ್‌ನ ಎರಡು ಸದನಗಳಲ್ಲಿ ಅಂಗೀಕರಿಸಲ್ಪಟ್ಟಿದ್ದು ನಂತರ ಎಪ್ರಿಲ್ 5ರಂದು ಅದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ್ದರು.

ವಕ್ಫ್ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ  ಹಲವಾರು ಅರ್ಜಿಗಳು ಸಲ್ಲಿಸಲ್ಪಟ್ಟಿವೆ. ಅವುಗಳು ಈಗ ಸುಪ್ರೀಂಕೋರ್ಟ್‌ನ ಪರಿಶೀಲನೆಯಲ್ಲಿದೆ. ವಕ್ಫ್ ತಿದ್ದುಪಡಿ ಕಾನೂನು ಸಾಂವಿಧಾನಿಕ  ಖಾತರಿ ಗಳನ್ನು ಉಲ್ಲಂಘಿಸುವುದಿಲ್ಲವೆಂದು ಕೇಂದ್ರ ಸರಕಾರ ವಾದಿಸಿ, ಈ ಮಸೂದೆ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸುವಂತೆ ಸುಪ್ರೀಂಕೋರ್ಟ್ ನೊಂದಿಗೆ  ವಿನಂತಿಸಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page