ವಯನಾಡಿನಲ್ಲಿ ಮಹಿಳೆಯನ್ನು ಕೊಂದು ತಿಂದ ಹುಲಿ ಪತ್ತೆಗೆ ತೀವ್ರ ಹುಡುಕಾಟ: ಮಾನಂತವಾಡಿಯಲ್ಲಿ ಯುಡಿಎಫ್ ಹರತಾಳ ಆರಂಭ; 27ರ ತನಕ ನಿಷೇಧಾಜ್ಞೆ ಜ್ಯಾರಿ
ಕಲ್ಪೆಟ್ಟ: ವಯನಾಡು ಜಿಲ್ಲೆಯ ಮಾನಂತವಾಡಿ ನಗರಸಭೆಯ ಪ್ರಿಯದರ್ಶನ್ ಎಸ್ಟೇಟ್‌ನ ಸಮೀಪದ ಪಂಜಾರಕೊಲ್ಲಿಯ ಖಾಸಗಿ ಕಾಫಿತೋಟಕ್ಕೆ ಕೆಲಸಕ್ಕೆ ಹೋದ ಮಿನ್‌ಮುಟ್ಟಿ ತಾರಾಟ್ ನಿವಾಸಿ ರಾಧ (46) ಎಂಬವರನ್ನು ನಿನ್ನೆ ಬೆಳಿಗ್ಗೆ ಹುಲಿ ಕೊಂಡು ತಿಂದ ಘಟನೆಯನ್ನು ಪ್ರತಿಭಟಿಸಿ ಯುಡಿಎಫ್ ಮತ್ತು ಎಸ್‌ಡಿಪಿಐ ಮಾನಂತವಾಡಿ ನಗರಸಭೆ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗಿನಿಂದ ಹರತಾಳ ಆರಂಭಿಸಿದೆ. ಹುಲಿ ದಾಳಿಯನ್ನು ಪ್ರತಿಭಟಿಸಿ ಭಾರೀ ಜನಾಕ್ರೋಶ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಮಾನಂತವಾಡಿ ನಗರಸಭಾ ವ್ಯಾಪ್ತಿಯಲ್ಲಿ ಈ ತಿಂಗಳ 27ರ ತನಕ ನಿಷೇಧಾಜ್ಞೆ ಜ್ಯಾರಿಗೊಳಿಸಲಾಗಿದೆ. ಇದರಂತೆ ಎಲ್ಲೆಡೆಗಳಲ್ಲಿ ಬಿಗು ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಕಾಫಿ ತೋಟದಲ್ಲಿ ನಿನ್ನೆ ಬೆಳಿಗ್ಗೆ 8.30ಕ್ಕೆ ಕೆಲಸದಲ್ಲಿ ನಿರತರಾಗಿದ್ದ ರಾಧಾರ ಮೇಲೆ ಹುಲಿ ದಾಳಿ ನಡೆಸಿ ಕೊಂದು ಮೃತದೇಹ ವನ್ನು 100 ಮೀಟರ್‌ನಷ್ಟು ದೂರ ಎಳೆದೊಯ್ದು ತಿಂದಿದೆ. ಈ ಪ್ರದೇಶದಲ್ಲಿ ಪೊಲೀಸ್ ವಿಭಾಗದ ತಂಡರ್ ಬೋಲ್ಟ್ ತಂಡ ಎಂದಿನಂತೆ ಗಸ್ತು ತಿರುಗುವಿಕೆಯಲ್ಲಿ ತೊಡಗಿದಾಗ ಅವರು ಹುಲಿ ಕೊಂದು ತಿಂದು ಉಪೇಕ್ಷಿಸಿದ ರಾಧಾರ ಮೃತದೇಹದ ಅವಶೇಷವನ್ನು ಪತ್ತೆಹಚ್ಚಿದ್ದಾರೆ. ರಾಧಾ ಅರಣ್ಯಇಲಾಖೆಯ ತಾತ್ಕಾಲಿಕ ವಾಚರ್ ಅಚ್ಚಾತನ್‌ರ ಪತ್ನಿಯಾಗಿದ್ದಾರೆ. ಆ ಎಸ್ಟೇಟ್‌ನ ಪಕ್ಕದಲ್ಲೇ ಇವರು ಕುಟುಂಬ ಸಮೇತ ವಾಸಿಸುತ್ತಿದ್ದಾರೆ. ರಾಧಾರನ್ನು ಕೊಂದು ತಿಂದ ವಿಷಯ ಬಹಿರಂಗಗೊಳ್ಳುತ್ತಿರುವಂತೆಯೇ ಈ ಪ್ರದೇಶದ ಜನರು ಭಾರೀ ಪ್ರತಿಭಟನೆ ಯೊಂದಿಗೆ ರಂಗಕ್ಕಿಳಿದಿದ್ದರು. ಹುಲಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಅವರು ಆಗ್ರಹಪಟ್ಟರು.
ವಿಷಯ ತಿಳಿದ ಸಚಿವ ಒ.ಆರ್. ಕೇಳು ಮತ್ತು ನೋರ್ತ್ ವಯನಾಡ್ ಡಿಎಫ್‌ಬಿ ಕೆ.ಜೆ. ಮಾರ್ಟಿನ್ ನೇತೃತ್ವದಲ್ಲಿ ಅರಣ್ಯ ಇಲಾಖಯ ತಂಡ ಅಲ್ಲಿಗೆ ಆಗಮಿಸಿದಾಗ ಅವರ ವಿರುದ್ಧವೂ ಜನರು ಪ್ರತಿಭಟನೆಯೊಂ ದಿಗೆ ಮುಗಿಬಿದ್ದರು. ದಾಳಿ ನಡೆಸಿದ ಹುಲಿಯನ್ನು ಗುಂಡಿಕ್ಕಿ ಕೊಲ್ಲವುದಾಗಿ ಸಚಿವರು ಭರವಸೆ ನೀಡಿದಾಗ ಜನಾಕ್ರೋಶ ಶಮನವಾಗತೊಡಗಿತು. ರಾಧಾರ ಮೃತದೇಹವನ್ನು ಮಾನಂತವಾಡಿ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಮರ ಣೋತ್ತರ ಪರೀಕ್ಷೆಗೊಳಪಡಿಸ ಲಾಯಿತು. ನರಭೋಜ ಹುಲಿಯನ್ನು ಪತ್ತೆಹಚ್ಚಿ ಗುಂಡಿಕ್ಕಿ ಕೊಲ್ಲುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ತೊಡಗಿದ್ದು, ಅದರಂತೆ ಆ ಪ್ರದೇಶದ ಅರಣ್ಯದಾದ್ಯಂತ ಹುಲಿ ಗಾಗಿರುವ ವ್ಯಾಪಕ ಶೋಧ ಆರಂಭಿಸಿದ್ದಾರೆ.