ವಯನಾಡಿನಲ್ಲಿ ಯುವತಿಯ ಇರಿದು ಕೊಂದ ಪ್ರಕರಣ: ಆರೋಪಿ ವಿರುದ್ಧ ಪೋಕ್ಸೋ ಕೇಸು ದಾಖಲು
ವಯನಾಡು: ತಿರುನೆಲ್ಲಿ ಎಂಬಲ್ಲಿ ಜೊತೆಯಲ್ಲಿ ವಾಸಿಸುತ್ತಿದ್ದ ಯುವತಿ ಯನ್ನು ಕಡಿದು ಕೊಂದ ಪ್ರಕರಣದಲ್ಲಿ ಆರೋಪಿ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದರು. ಯುವತಿಯ ಸಂಬಂಧಿಕೆಯಾದ ಪ್ರಾಯಪೂರ್ತಿ ಯಾಗದ ಬಾಲಕಿಯನ್ನು ದೌರ್ಜನ್ಯಗೈದಿರು ವುದಾಗಿ ಲಭಿಸಿದ ದೂರಿನಲ್ಲಿ ಈ ಕೇಸು ದಾಖಲಿಸಲಾಗಿದೆ. ಮಾನಂತವಾಡಿ ಪಿಲಕ್ಕಾವ್‌ತರ ನಿವಾಸಿ ದಿಲೀಶ್ (35) ವಿರುದ್ಧ ಈ ಕೇಸು ದಾಖಲಿಸಲಾಗಿದೆ. ಕಾಟಿಕುಳಂ ಎಡಯೂರ್‌ಕುನ್ನ್ ನಿವಾಸಿ ಪ್ರವೀಣ (34)ಳನ್ನು ಆದಿತ್ಯವಾರ ಈತ ಕೊಲೆಗೈದಿದ್ದನು. ಪ್ರವೀಣಳ ಹಿರಿಯ ಮಗಳು ಅನರ್ಘಳನ್ನು ಕೂಡಾ ಈತ ಇರಿದಿ ದ್ದನು. ಕೊಲೆಕೃತ್ಯದ ಬಳಿಕ ಕಿರಿಯ ಪುತ್ರಿ ಅಬಿನಿಯನ್ನು ಅಪಹರಿಸಿಕೊಂಡು ಹೋಗಿರುವುದಕ್ಕೂ ಕೇಸು ದಾಖಲಿಸಲಾಗಿದೆ. ಆರೋಪಿಯನ್ನು ಇಂದು ಕಲ್ಪಟ್ಟ ಪೋಕ್ಸೋ ನ್ಯಾಯಾ ಲಯದಲ್ಲಿ ಹಾಜರುಪಡಿಸುವರು.
ಕೊಲೆ ಕೃತ್ಯದ ಬಳಿಕ ನಾಪತ್ತೆ ಯಾಗಿದ್ದ ಈತನನ್ನು ಈ ಮನೆಯಿಂದ ೩೫೦ ಮೀಟರ್ ದೂರದ ಜನವಾಸ ವಿಲ್ಲದ ಇನ್ನೊಂದು ಮನೆಯಿಂದ ಸೆರೆ ಹಿಡಿಯಲಾಗಿತ್ತು. ಪತಿಯನ್ನು ಬಿಟ್ಟು ಮಕ್ಕಳ ಜೊತೆ ಬಾಡಿಗೆ ಕೊಠಡಿಯಲ್ಲಿ ಪ್ರವೀಣ ವಾಸವಾಗಿದ್ದರು.