ವಯನಾಡು ದುರಂತ ಹಿನ್ನೆಲೆ: ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶಕೇಂದ್ರ ಸರಕಾರ ಘೋಷಣೆ

ನವದೆಹಲಿ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭಾರೀ ಭೂಕುಸಿತ ದುರಂತದ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟದ ಸುಮಾರು 57,000 ಚದರ ಕಿಲೋ ಮೀಟರ್ ಪ್ರದೇಶ ವನ್ನು ಪರಿಸರ ಸೂಕ್ಷ್ಮ ಪ್ರದೇಶವ ನ್ನಾಗಿ ಘೋಷಿಸಿ ಕೇಂದ್ರ ಸರಕಾರ ವಿದ್ಯುಕ್ತ ಅಧಿಸೂಚನೆ ಹೊರಡಿಸಿದೆ.
ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶದಲ್ಲಿ ವಯನಾಡಿನ 13 ಗ್ರಾಮಗಳು ಸೇರಿದಂತೆ ಕೇರಳದ ಸುಮಾರು 13,108 ಚದರ ಕಿಲೋ ಮೀಟರ್ ಪ್ರದೇಶಗಳು ಒಳಗೊಂಡಿದೆ. ಪಶ್ಚಿಮ ಘಟ್ಟದ ಶೇ. 36ರಷ್ಟು ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಸರಕಾರ 2022 ಜುಲೈ 31ರಂದೇ ಘೋಷಿಸಿ ಅಧಿಸೂಚನೆ ಹೊರಡಿಸಿತ್ತು.
ಈ ಬಗ್ಗೆ ನಾಗರಿಕರಿಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಕೇಂದ್ರ ಸರಕಾರ 60 ದಿನಗಳ ಕಾಲಾವಕಾಶ ನೀಡಿದೆ. ಅದರ ನಂತರ ಅಂತಿಮ ಅಧಿಸೂಚನೆಯನ್ನು ರಾಜ್ಯವಾರು ಅಥವಾ ಸಂಯೋಜಿತ ಆದೇಶದಲ್ಲಿ ಪ್ರಕಟಿಸಲಾಗುವುದೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕೇರಳದ ಹೊರತಾಗಿ ಕರ್ನಾಟಕ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಸೇರಿ ಪಶ್ಚಿಮ ಘಟ್ಟದ 56,826 ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಅಧಿಸೂಚನೆಯಲ್ಲಿ ಘೋಷಿಸಲಾಗಿದೆ. ಇದರಲ್ಲಿ ವಯನಾಡಿನ 13 ಗ್ರಾಮಗಳೂ ಸೇರಿ ಕೇರಳದ 13,108 ಚದರ ಕಿ.ಮೀ ಪ್ರದೇಶ ಒಳಗೊಂಡಿದೆ.
ಕೇAದ್ರ ಸರಕಾರ ಕರಡು ಅಧಿಸೂ ಚನೆಯನ್ನು ಹೊರಡಿಸುತ್ತಿರುವುದು ಇದು ಆರನೇ ಬಾರಿ. ಕೊನೆಯ ಕರಡು ಅಧಿಸೂಚನೆಯನ್ನು 2022 ಜುಲೈಯಲ್ಲಿ ಹೊರಡಿಸಲಾಗಿತ್ತು. ಮತ್ತ್ತು ರಾಜ್ಯ ಸರಕಾರಗಳೊಂದಿಗೆ ಸಂಯೋಜನೆ ಅಧಿಸೂಚನೆಯನ್ನು ಅಂತಿಮಗೊಳಿಸಲು ಸಮಿತಿಯನ್ನೂ ಸಹ ರಚಿಸಲಾಗಿತ್ತು. ಕೇರಳದಲ್ಲಿ 13,108 ಚದರ ಕಿಲೋ ಮೀಟರ್ ಪ್ರದೇಶವನ್ನು ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಒಳಗೊಂಡಿದೆ ಎಂದು ಕಸ್ತೂರಿರಂಗನ್ ಸಮಿತಿಯಲ್ಲಿ ಸ್ಪಷ್ಟಪಡಿಸಲಾಗಿತ್ತು. ಆ ಬಳಿಕ ಉಮ್ಮನ್ ವಿ ಉಮ್ಮನ್ ಸಮಿತಿ ನಡೆಸಿದ ಸಮೀಕ್ಷೆಯಲ್ಲಿ ಈ ವ್ಯಾಪ್ತಿ ಯಲ್ಲಿ 9993.7 ಚದರ ಕಿಲೋ ಮೀಟರ್ ಮಾತ್ರವೇ ಒಳಗೊಂಡಿದೆಯೆAದು ತಿಳಿಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಅದನ್ನು ಕೇಂದ್ರ ಸರಕಾರ ಅಂಗೀಕರಿಸಿತ್ತು. ಅದಾದ ಬಳಿಕ ಈ ವ್ಯಾಪ್ತಿಯಿಂದ 1337.24 ಚದರ ಕಿ.ಮೀ. ಪ್ರದೇಶವನ್ನು ಹೊರತುಪಡಿ ಸಬೇಕೆಂದು ಕೇರಳ ಕೇಂದ್ರದೊಡನೆ ಆಗ್ರಹಪಟ್ಟಿತ್ತು. ಅದನ್ನು ಕೇಂದ್ರ ಪರಿಗಣಿಸಿಲ್ಲ.
ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶದಲ್ಲಿ ಕಾಸರಗೋಡು ಜಿಲ್ಲೆಯ ಯಾವುದೇ ಪ್ರದೇಶ ಒಳಗೊಂಡಿಲ್ಲ. 12 ಜಿಲ್ಲೆಗಳ ಪ್ರದೇಶಗಳು ಇದರಲ್ಲಿ ಒಳಗೊಂಡಿದೆ. ಎರ್ನಾಕುಳಂನಲ್ಲಿ ಒಂದು ಗ್ರಾಮ, ಇಡುಕ್ಕಿ-51 ಗ್ರಾಮಗಳು, ಕಣ್ಣೂರು- 3, ಕೊಲ್ಲಂ-8, ಕೋಟ್ಟಯಂ-4, ಕಲ್ಲಿಕೋಟೆ-9, ಮಲಪ್ಪುರಂ-10, ಪಾಲ್ಘಾಟ್-13, ಪತ್ತನಂತಿಟ್ಟ-7, ತಿರುವನಂ ತಪುರ-7, ತೃಶೂರು-2 ಮತ್ತು ವಯನಾಡು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶದಲ್ಲಿ 13 ಗ್ರಾಮಗಳು ಒಳಗೊಂಡಿವೆ.

Leave a Reply

Your email address will not be published. Required fields are marked *

You cannot copy content of this page