ವಯನಾಡು ಭೂಕುಸಿತ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಆರಂಭ
ತಿರುವನಂತಪುರ: ವಯನಾಡು ಭೂ ಕುಸಿತದಲ್ಲಿ ಇನ್ನೂ ನಾಪತ್ತೆಯಾದವರ ಕುರಿತಾದ ಪೂರ್ಣ ಮಾಹಿತಿ ಸಂಗ್ರಹಿಸಲು ಹಾಗೂ ಮುಂದಿನ ಅಗತ್ಯದ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ ಸಚಿವ ಸಂಪುಟ ಉಪಸಮಿತಿಯ ಸಭೆ ಆರಂಭಗೊಂಡಿದೆ.
ಇದರ ಹೊರತಾಗಿ ಸ್ಥಳೀಯಾಡಳಿತ ಸಚಿವ ಎಂ.ವಿ. ರಾಜೇಶ್‌ರ ಅಧ್ಯಕ್ಷತೆಯಲ್ಲೂ ಇಂದು ಬೆಳಿಗ್ಗೆ ರಾಜ್ಯ ಸ್ಥಳೀಯಾಡಳಿತ ಖಾತೆಯ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ ಸಭೆಯೂ ನಡೆಯಿತು. ಮುಂಡಕೈ ಮತ್ತು ಚೂರಲ್‌ಮಲೆಯಿಂದ ಇನ್ನೂ ನಾಪತ್ತೆಯಾದವರ ಪೂರ್ಣ ಮಾಹಿತಿಯನ್ನು ಪಂಚಾಯತ್‌ನ ಸಹಾಯದಿಂದ ಸಂಗ್ರಹಿಸಲಾಗುತ್ತಿದೆ. ಭೂ ಕುಸಿತವುಂಟಾದ ಪ್ರದೇಶದಲ್ಲಿ 1721 ಮನೆಗಳಿದ್ದು, ಅದರಲ್ಲಿ 4830 ಮಂದಿ ಇದ್ದರೆಂದು ಪಂಚಾ ಯತ್‌ನ ಲೆಕ್ಕಾಚಾರವಾಗಿದೆ. ಇದರಲ್ಲಿ ನಾಪತ್ತೆಯಾದವರ ಹೆಸರನ್ನು ಸಂಗ್ರಹಿಸಿ ಅವರ ಪತ್ತೆಗಾಗಿರುವ ಕ್ರಮ ಕೈಗೊಳ್ಳುವ ತೀರ್ಮಾನವನ್ನು ಸಭಯಲ್ಲಿ ಕೈಗೊಳ್ಳ ಲಾಯಿತು. ನಾಪತ್ತೆಯಾದವರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ಸತತ 7ನೇ ದಿನವಾದ ಇಂದೂ ಮುಂದುವರಿಯುತ್ತಿದೆ. ಈ ದುರಂತದಲ್ಲಿ ಈತನಕ 387 ಮಂದಿ ಸಾವನ್ನಪ್ಪಿದ್ದಾರೆ. 180 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಪತ್ತೆಯಾದ ಮೃತದೇಹಗಳ ಪೈಕಿ 167 ಮೃತದೇಹಗಳ ಗುರುತು ಹಚ್ಚಲು ಸಾಧ್ಯವಾಗಿಲ್ಲ. ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾದ ದೇಹದ ಭಾಗಗಳ ಗುರುತು ಪತ್ತೆಹಚ್ಚಲು ಅವುಗಳನ್ನು ಡಿಎನ್‌ಎ ಪರೀಕ್ಷೆಗೊಳಪಡಿಸುವ ಕ್ರಮ ಆರಂಭಿಸಲಾಗಿದೆ.