ವಯನಾಡ್ ದುರಂತ : ಅಮಿಕ್ವಸ್ ಕ್ಯೂರಿ ವರದಿ ಸಲ್ಲಿಕೆ
ಕೊಚ್ಚಿ: ವಯನಾಡು ದುರಂತಕ್ಕೆ ಸಂಬಂಧಿಸಿ ನಿರ್ಣಾಯಕ ವರದಿಯನ್ನು ಅಮಿಕ್ವಸ್ ಕ್ಯೂರಿ ಹೈಕೋರ್ಟ್‌ಗೆ ಸಲ್ಲಿಸಿದೆ. ವಯನಾಡು ಭೂ ಕುಸಿತ ದುರಂತ ಬಗ್ಗೆ ಮುನ್ಸೂಚನೆಗಳನ್ನು ಅವಗಣಿಸಲಾಗಿದೆ ಎಂದು ವರದಿ ಯಲ್ಲಿ ತಿಳಿಸಲಾಗಿದೆ. ವಯನಾಡ್ ನಲ್ಲಿ ಐದು ವರ್ಷಕ್ಕೆ ಹವಾಮಾನ ವೈಪರೀತ್ಯ ಉಂಟಾಗಲಿದೆ ಎಂದು 2019ರ ಡಿಸಾಸ್ಟರ್ ಮೆನೇಜ್ ಮೆಂಟ್ ಪ್ಲಾನ್‌ನಲ್ಲಿ ಹೇಳಲಾಗಿದೆ. ವಯನಾಡ್‌ನ 29 ಗ್ರಾಮಗಳು ಸಮಸ್ಯೆ ಬಾಧಿತ ಪ್ರದೇಶಗಳಾಗಿವೆ ಎಂದು ವರದಿಯಲ್ಲಿದೆ ಎಂದು ಅಮಿಕ್ವಸ್ ಕ್ಯೂರಿ ತನ್ನ ವರದಿಯಲ್ಲಿ ತಿಳಿಸಿದೆ. ವಯನಾಡ್‌ನಲ್ಲಿ ಅಗತ್ಯದ ಮುಂಜಾಗ್ರತೆಗಳನ್ನು ಕೈಗೊಳ್ಳದಿರುವುದು ಭಾರೀ ದುರಂತಕ್ಕೆ ಕಾರಣವಾಗಿದೆ.
ಆರೆಂಜ್ ಬುಕ್‌ನಲ್ಲಿ ಒಳಗೊಂಡ ಪ್ರದೇಶವಾಗಿದ್ದರೂ ವೈಜ್ಞಾನಿಕವಾಗಿ ಮಳೆಯ ಪ್ರಮಾಣ ಪತ್ತೆಹಚ್ಚಲಾಗಲಿಲ್ಲ. ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ವ್ಯವಸ್ಥೆಯಿಲ್ಲದಿರುವುದು ದುರಂತದ ತೀವ್ರತೆ ಹೆಚ್ಚಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.