ವಯನಾಡ್ ದುರಂತ ಮುಂದುವರಿದ ರಕ್ಷಣಾ ಕಾರ್ಯಾಚರಣೆ

ವಯನಾಡ್: ಮುಂಡಕ್ಕೈ ಹಾಗೂ ಚೂರಲ್‌ಮಲೆ ಎಂಬೀ ಪ್ರದೇಶಗಳಲ್ಲಿ ಭಾರೀ ನಾಶನಷ್ಟಕ್ಕೆ ಕಾರಣವಾದ ಭೂಕುಸಿತ ದುರಂತ ಸಂಭವಿಸಿ ಇಂದಿಗೆ ಎಂಟು ದಿನಗಳಾಗಿದ್ದು, ಇದೀಗಲೂ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ.  ದುರಂತದಲ್ಲಿ ಮೃತಪಟ್ಟವರ  ಸಂಖ್ಯೆ ೪೦೨ಕ್ಕೇರಿದೆ. ಇನ್ನೂ ನೂರಕ್ಕೂ ಹೆಚ್ಚು ಮಂದಿಯ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಇಂದು ಸೂಚಿಪ್ಪಾರದ ಸನ್‌ರೈಸ್ ವ್ಯಾಲಿ ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದೆ. ಈ ಭಾಗದಲ್ಲಿ  ಇದುವರೆಗೆ ಶೋಧ ನಡೆದಿಲ್ಲ.

ಕೇರಳ ಕಂಡ ಅತೀ ದೊಡ್ಡ ದುರಂತ ಇದಾಗಿದ್ದು,  ದಿನದಿಂದ ದಿನಕ್ಕೆ ಸಾವಿಗೀಡಾದವರ ಸಂಖ್ಯೆ ಹೆಚ್ಚುತ್ತಿರುವುದು ಭಾರೀ ಆತಂಕಕ್ಕೂ ಕಾರಣವಾಗಿದೆ. ಇದುವರೆಗೆ ಲಭಿಸಿದ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಗುರುತು ಹಚ್ಚಲು ಸಾಧ್ಯವಾಗದ ಮೃತದೇಹಗಳನ್ನು  ಪೂತುಮಲೆಯಲ್ಲಿ ಸಾಮೂಹಿಕವಾಗಿ ಸರ್ವಮತ ಪ್ರಾರ್ಥನೆಯ ಬಳಿಕ ಸಂಸ್ಕರಿಸಲಾಯಿತು.

You cannot copy contents of this page