ವರದಕ್ಷಿಣೆಗಾಗಿ ಯುವತಿಗೆ ಕಿರುಕುಳ: ಪತಿ ಸಹಿತ  ಮೂವರ ವಿರುದ್ಧ ಕೇಸು

ಕುಂಬಳೆ: ವರದಕ್ಷಿಣೆಗಾಗಿ ಒತ್ತಾಯಿಸಿ ಯುವತಿಗೆ ಕಿರುಕುಳ ನೀಡಿದ ಆರೋಪದಂತೆ ನ್ಯಾಯಾ ಲಯದ ನಿರ್ದೇಶ ಮೇರೆಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಪುತ್ತಿಗೆ ಎ.ಕೆ.ಜಿ ನಗರದ ಉದಯ ಶಂಕರ ಭಟ್‌ರ ಪುತ್ರಿ ಶ್ರೀದೇವಿ(೨೯) ನೀಡಿದ ದೂರಿನಂತೆ ಆಕೆಯ ಪತಿ ಪೆರ್ಮುದೆ ಮಾಣಿ ಹೌಸ್‌ನ ಪ್ರದೀಪ್ (೩೩), ಈತನ ತಂದೆ  ಕೇಶವ ಭಟ್ (೬೫), ತಾಯಿ ಸುಗೇಶಿನಿ (೬೦) ಎಂಬಿವರ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶ್ರೀದೇವಿ ಹಾಗೂ ಪ್ರದೀಪರ ಮದುವೆ ೨೦೧೨ರಲ್ಲಿ ನಡೆದಿತ್ತು. ಇದೀಗ ವರದಕ್ಷಿಣೆಗಾಗಿ ಒತ್ತಾಯಿಸಿ ಪತಿ, ಅತ್ತೆ, ಮಾವ ಶಾರೀರಿಕ, ಮಾನಸಿಕ ಕಿರುಕುಳ ನೀಡುತ್ತಿರುವು ದಾಗಿ  ಆರೋಪಿಸಿ ಶ್ರೀದೇವಿ ದೂರು ನೀಡಿದ್ದರು. ಇದರಂತೆ ಕೇಸು ದಾಖಲಿಸಲು ಜೆಎಫ್‌ಸಿಎಂ ನ್ಯಾಯಾಲಯ ಕುಂಬಳೆ ಪೊಲೀಸರಿಗೆ ನಿರ್ದೇಶ ನೀಡಿತ್ತು.

You cannot copy contents of this page