ವರ್ಕಾಡಿಯಲ್ಲಿ ಮಾದಕವಸ್ತು ಬೇಟೆ : ಆಟೋದಲ್ಲಿ ಸಾಗಿಸುತ್ತಿದ್ದ 1.14 ಕಿಲೋ ಗಾಂಜಾ ಸಹಿತ ಮೂರು ಮಂದಿ ಸೆರೆ
ವರ್ಕಾಡಿ: ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 1.16 ಕಿಲೋ ಗಾಂಜಾ ಸಹಿತ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣಕನ್ನಡ ಮಂಜನಾಡಿ ಸಿಪಿ ನಗರ ನಿವಾಸಿ ಜಾಫರ್ ಸಿದ್ದಿಕ್ (23), ಉಳ್ಳಾಲ ದರ್ಗಾ ಸಮೀಪದ ನಿವಾಸಿ ಮುಹಮ್ಮದ್ ಸಿರಾಜುದ್ದೀನ್ (25), ದ.ಕ. ಬೇಂಗ್ರೆ ಕಸಬಾ ಮಸೀದಿ ಸಮೀಪದ ಇಸ್ಮಾಯಿಲ್ ಮಂಜಿಲ್‌ನ ಮೊಹಮ್ಮದ್ ನಿಯಾಸ್ (21) ಎಂಬಿವರನ್ನು ಸೆರೆ ಹಿಡಿಯಲಾಗಿದೆ. ಎಸ್‌ಐ ಕೆ.ಆರ್. ಉಮೇಶ್ ಹಾಗೂ ತಂಡ ಇವರನ್ನು ಬಂಧಿಸಿದೆ. ನಿನ್ನೆ ಸಂಜೆ 4.15ರ ವೇಳೆ ವರ್ಕಾಡಿ ತಿಮ್ಮಂಗೂರು ಎಂಬ ಸ್ಥಳದಲ್ಲಿ ತಂಡ ಸೆರೆಯಾಗಿದೆ. ವಿವಿಧ ಸ್ಥಳಗಳಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡಲು ಈ ತಂಡ ಗಾಂಜಾ ಸಾಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.