ವರ್ಕಾಡಿಯ ಮನೆಯಿಂದ ಅಡಿಕೆ ಕಳವು: ಇನ್ನೋರ್ವ ಸೆರೆ
ಮಂಜೇಶ್ವರ: ವರ್ಕಾಡಿ ನಲ್ಲೆಂಗಿಪದವಿನ ಸಾಜಿದ್ ಕಂಪೌಂಡ್‌ನ ರೆಹ್ಮಾನ್ ಸಹೀಂ ಎಂಬವರ ಮನೆಯಿಂದ ಅಡಿಕೆ ಕಳವುಗೈದ ಪ್ರಕರಣದಲ್ಲಿ ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಡಾಜೆ ಕಾಜೂರು ನಿವಾಸಿ ಅಬ್ದುಲ್ ನೌಶಾದ್ (೨೦) ಎಂಬಾತ ಬಂಧಿತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಕಡಂಬಾರು ಇಡಿಯಾ ನಿವಾಸಿ ಮುಸ್ತಾಕ್ ಹುಸೈನ್ (೨೨), ಕಾಜೂರು ನಿವಾಸಿ ಅಬ್ದುಲ್ ರಶೀದ್ (೨೧) ಎಂಬಿವರನ್ನು ಮೊನ್ನೆ ಬಂಧಿಸಲಾಗಿತ್ತು.ಈ ತಿಂಗಳ ೫ ಹಾಗೂ ೬ರ ಮಧ್ಯೆ ಕಳ್ಳರು ಮನೆಯಿಂದ ಅಡಿಕೆ ಕಳವು ನಡೆಸಿದ್ದಾರೆ. ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಆರೋಪಿಗಳು ಆರು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ೧,೭೫,೦೦೦ ರೂಪಾಯಿ ಮೌಲ್ಯದ ಅಡಿಕೆ ಕಳವು ನಡೆಸಿರುವುದಾಗಿ ದೂರಲಾಗಿದೆ