ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ನೂತನ ಕಟ್ಟಡ ಉದ್ಘಾಟನೆ ಜೂನ್ 3ರಂದು

ವರ್ಕಾಡಿ: ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಓಪರೇಟಿವ್ ಸೊಸೈಟಿ ಮಜೀರ್ಪಳ್ಳ ಕೇಂದ್ರೀಕರಿಸಿ   ಕಾರ್ಯಾಚರಿಸುತ್ತಿದ್ದು, ಸೊಸೈಟಿಯ ಸ್ವಂತ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟಡ ಉದ್ಘಾಟನೆ ಜೂನ್ 3ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಕುದುರು ಧ್ವಜಾರೋಹಣ ನಡೆಸುವರು. ಬಳಿಕ ನಡೆಯುವ ಸಭೆಯಲ್ಲಿ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ರವೀಂದ್ರ ಮಡ್ವ ವರದಿ ವಾಚಿಸುವರು. ಸಚಿವ ವಿ.ಎನ್. ವಾಸವನ್ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸುವರು. ಭದ್ರತಾ ಕೊಠಡಿಯನ್ನು ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸು ವರು. ಕೌಂಟರ್‌ನ  ಉದ್ಘಾಟನೆ ಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ನೆರವೇರಿಸುವರು. ಕೋ-ಆಪರೇಟಿವ್ ಸೊಸೈಟಿ ಕಾಸರಗೋಡು ಇದರ ಡೆಪ್ಯುಟಿ ರಿಜಿಸ್ಟ್ರಾರ್ ಚಂದ್ರನ್ ವಿ ಠೇವಣಿ ಸ್ವೀಕರಿಸುವರು. ಸರ್ಕಲ್ ಕೋ-ಆಪರೇಟಿವ್ ಯೂನಿಯನ್ ಕಾಸರಗೋಡು ಇದರ ಚೆಯರ್ ಮೆನ್ ಕೆ.ಆರ್. ಜಯಾನಂದ ಸಾಲ ವಿತರಿಸುವರು. ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ  ಸುಂದರಿ ಆರ್ ಶೆಟ್ಟಿ, ವರ್ಕಾಡಿ ಪಂ. ಅಧ್ಯಕ್ಷೆ ಭಾರತಿ ಎಸ್, ಕೋ-ಆಪರೇಟಿವ್ ಸೊಸೈಟಿ ಮಂಜೇಶ್ವರ ಇದರ ಅಸಿಸ್ಟೆಂಟ್ ರಿಜಿಸ್ಟ್ರಾರ್ ರವೀಂದ್ರ ಎ, ಕೋ ಆಪರೇಟಿವ್ ಸೊಸೈಟಿ ಆಡಿಟ್ ಕಾಸರಗೋಡು ಇದರ ಅಸಿಸ್ಟೆಂಟ್ ಡೈರೆಕ್ಟರ್ ಮೊಹಮ್ಮದ್ ಸಾಲಿ ಕೆ ಮುಖ್ಯ ಅತಿಥಿಗಳಾಗಿರುವರು. ಹಲವರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸೊಸೈಟಿಯ ಸ್ಥಾಪಕ ಅಧ್ಯಕ್ಷ ಸದಾನಂದ ಶೆಟ್ಟಿ ಹಾಗೂ ಸ್ಥಾಪಕ ಗೌರವ ಕಾರ್ಯದರ್ಶಿ ಡಿ. ಬೂಬ ಎಂಬಿವರಿಗೆ ಗೌರವಾರ್ಪಣೆ ನಡೆಯಲಿದೆ.

RELATED NEWS

You cannot copy contents of this page