ವಳಯಂ ಉಸ್ತಾದ್ ನಿಧನ
ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣ ಬಳಿಯ ಬತ್ತೇರಿಯಲ್ಲಿ ವಾಸಿಸುವ ಹಾಜಿ ಹಸೈನಾರ್ ಮುಸ್ಲಿಯಾರ್ ಯಾನೆ ವಳಯಂ ಉಸ್ತಾದ್ (54) ನಿಧನಹೊಂದಿದರು. ಇಂದು ಮುಂಜಾನೆ 1.30ರ ವೇಳೆ ಎದೆನೋವು ಕಾಣಿಸಿಕೊಂಡ ಇವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಕುಂಬಳೆ ಮುನೀರುಲ್ ಇಸ್ಲಾಂ ಮದ್ರಸಾದ ಅಧ್ಯಾಪಕನೂ, ನಾಟಿ ವೈದ್ಯನೂ ಆಗಿದ್ದರು.
ಮೃತರು ಪತ್ನಿ ಸುಹರಾ, ಮಕ್ಕಳಾದ ಸಲ್ಮಾನ್ ವಾಫಿ, ಮೊಹಮ್ಮದ್ ಲಿಹಾವುದ್ದೀನ್, ಜಶ್ವಾನ್ ರಾಸಿ ಇಮಾಮಿ, ಮೊಯ್ನುದ್ದೀನ್ ಶಾಕಿರ್, ಖದೀಜತ್ ಕುಬ್ರ, ಆಯಿಶತ್ ಫಾಯಿಸ, ಬಲ್ಕೀಸತ್ ತಹ್‌ಸಿನ, ಸೈನಬತ್ ತಸ್ರಿಯ, ಇಬ್ರಾಹಿಂ ಹಾಶಿರ್, ಅಳಿಯಂದಿರಾದ ಫಸಲ್ ಕೊಲ್ಲಂಬಾಡಿ, ಅಸೀಸ್ ತಳಂಗರೆ, ಇಬ್ರಾಹಿಂ ಖಲೀಲ್ ಅಶಾಫಿ, ಸಹೋದರರಾದ ಮೊಹಮ್ಮದ್ ಹಾಜಿ, ಅಬ್ಬಾಸ್ ನಹೀನಿ, ಅಬೂಬಕರ್ ಸಿದ್ದಿಕ್, ಇಬ್ರಾಹಿಂ ಖಲೀಲ್, ಸಹೋದರಿ ಆಯಿಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.