ವಶಕ್ಕೆ ತೆಗೆದ ರಿಕ್ಷಾ ಬಿಟ್ಟುಕೊಡದ ಪೊಲೀಸರು: ಮನನೊಂದು ವೀಡಿಯೋ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಶರಣಾದ ಚಾಲಕ

ಕಾಸರಗೋಡು: ಪೊಲೀಸರು ವಶಕ್ಕೆ ತೆಗೆದುಕೊಂಡ ಆಟೋ ರಿಕ್ಷಾವನ್ನು ಐದು ದಿನ ಕಳೆದರೂ ಬಿಟ್ಟುಕೊಡದಿರುವು ದರಿಂದ  ಮನನೊಂದ ಚಾಲಕ ವೀಡಿ ಯೋ ಪೋಸ್ಟ್ ಮಾಡಿದ ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಿನ್ನೆ ನಡೆದಿದೆ.

ಮೂಲತಃ ಕರ್ನಾಟಕ ನಿವಾಸಿ, ಕಾಸರಗೋಡು ರೈಲು ನಿಲ್ದಾಣ ರಸ್ತೆ ಬಳಿಯ ಶೌಕತ್ತ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಕೆ. ಅಬ್ದುಲ್ ಸತ್ತಾರ್ (60) ಆತ್ಮಹತ್ಯೆಗೈದ ಆಟೋ ರಿಕ್ಷಾ ಚಾಲಕ.

ನಗರದ ಗೀತಾ ಟಾಕೀಸ್ ಜಂಕ್ಷನ್ ಬಳಿ ಟ್ರಾಫಿಕ್ ಸಮಸ್ಯೆಯ ಹೆಸರಲ್ಲಿ ಅಬ್ದುಲ್ ಸತ್ತಾರ್‌ರ ಆಟೋ ರಿಕ್ಷಾವನ್ನು ಕಳೆದ ಗುರುವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ಬಿಟ್ಟು ಕೊಡುವಂತೆ ಅಬ್ದುಲ್ ಸತ್ತಾರ್ ಹಲವು ಬಾರಿ ಪೊಲೀಸ್ ಠಾಣೆಗೆ ಹೋಗಿ ಮನವಿ ಮಾಡಿಕೊಂಡಿದ್ದರು. ಆದರೆ  ಲಭಿಸದಿ ದ್ದಾಗ ಅವರು ಆ ಬಗ್ಗೆ ಡಿವೈಎಸ್ಪಿಗೆ ಮನವಿ ಸಲ್ಲಿಸಿದ್ದರು. ಬಳಿಕ ಕಾಸರ ಗೋಡು ಪೊಲೀಸರು ತನ್ನ ಆಟೋ ರಿಕ್ಷಾವನ್ನು ವಶಕ್ಕೆ ತೆಗೆದುಕೊಂಡಿ ದ್ದರೆಂದೂ ಅದನ್ನು ಬಿಟ್ಟು ಕೊಡದಿರುವು ದರಿಂದ ನಾನು ಆತ್ಮಹತ್ಯೆಗೈಯ್ಯಲು ತೀರ್ಮಾನಿಸಿರುವುದಾಗಿ  ಫೇಸ್‌ಬುಕ್ ನಲ್ಲಿ ಮಾಡಲಾದ ಪೋಸ್ಟ್‌ನಲ್ಲಿ ಅಬ್ದುಲ್ ಸತ್ತಾರ್ ತಿಳಿಸಿದ್ದರು.  ಆ ವೀಡಿಯೋ ವಿಕ್ಷೀಸಿದವರು ತಕ್ಷಣ ಕ್ವಾರ್ಟರ್ಸ್‌ಗೆ ಆಗಮಿಸಿ ನೋಡಿದಾಗ ಅದರೊಳಗೆ ಅಬ್ದುಲ್ ಸತ್ತಾರ್  ಫ್ಯಾನ್‌ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಕ್ವಾರ್ಟರ್ಸ್‌ನ ಬಾಗಿಲನ್ನು ಒಳಗಿನಿಂದ  ಚಿಲಕ ಹಾಕಿದ ಸ್ಥಿತಿಯಲ್ಲಿತ್ತು. ಆಟೋ ರಿಕ್ಷಾ ಬಿಟ್ಟು ಕೊಡುವಂತೆ ಡಿವೈಎಸ್ಪಿ ತಿಳಿಸಿದ್ದರೆಂದೂ ಆದರೆ ಅದನ್ನು ಪಡೆಯಲು ಅಬ್ದುಲ್ ಸತ್ತಾರ್ ಠಾಣೆಗೆ ಬಂದಿರಲಿಲ್ಲವೆಂದೂ ಪೊಲೀ ಸರು ತಿಳಿಸಿದ್ದಾರೆ.

ಅಬ್ದುಲ್ ಸತ್ತಾರ್ ಆತ್ಮಹತ್ಯೆಗೈದು ದನ್ನು ಪ್ರತಿಭಟಿಸಿ ಆಟೋ ರಿಕ್ಷಾ ಚಾಲಕರು  ನಿನ್ನೆ  ನಗರದಲ್ಲಿ ಪ್ರತಿಭಟನೆ ನಡೆಸಿದರು. ರಿಕ್ಷಾ ಚಾಲಕರ ದಂಡೇ ನಿನ್ನೆ ಸಂಜೆ ಪೊಲೀಸ್  ಠಾಣೆಗೆ ಆಗಮಿಸಿತ್ತು. ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.

ಮೃತರು ಪತ್ನಿ ಮಂಗಳೂರು ನಿವಾಸಿ ಹಸೀನಾ, ಮಕ್ಕಳಾದ ಸನ, ಶಾನೀಸ್, ಶಂನ, ಸಹೋದರ-ಸಹೋ ದರಿಯರಾದ ಅಬ್ದುಲ್ ಮಜೀದ್, ಅಬ್ದುಲ್  ನಸೀರ್, ಹಯರುನ್ನೀಸಾ, ಶಂಸುನ್ನೀಸಾ, ಸುಲೇಖಾಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜಿಲ್ಲಾ ಕ್ರೈಂ ಬ್ರಾಂಚ್‌ನಿಂದ ತನಿಖೆ

ಕಾಸರಗೋಡು: ನಗರದ ರೈಲು ನಿಲ್ದಾಣ ರಸ್ತೆ ಬಳಿಯ ನಿವಾಸಿ ಅಬ್ದುಲ್ ಸತ್ತಾರ್ ಆತ್ಮಹತ್ಯೆಗೈದ ಹಿನ್ನೆಲೆ ಬಗ್ಗೆ ಜಿಲ್ಲಾ ಕ್ರೈಂ ಬ್ರಾಂಚ್ ನಿಂದ ತನಿಖೆ ನಡೆಸಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ.

ಇದೇ ಸಂದರ್ಭದಲ್ಲಿ ಆಟೋ ರಿಕ್ಷಾವನ್ನು ವಶಕ್ಕೆ ತೆಗೆದುಕೊಂಡ ವಿಷಯದಲ್ಲಿ ಪೊಲೀಸರ ವತಿಯಿಂದ ತಪ್ಪುಗಳು ಉಂಟಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸುವ ಹೊಣೆಗಾರಿಕೆಯನ್ನು ಜಿಲ್ಲಾ ಹೆಚ್ಚುವರಿ ಎಸ್‌ಪಿ ಪಿ. ಬಾಲಕೃಷ್ಣನ್ ನಾಯರ್‌ಗೆ ಇಲಾಖೆ ವಹಿಸಿಕೊಟ್ಟಿದೆ.

ಎಸ್‌ಐ ವರ್ಗಾವಣೆ

ಕಾಸರಗೋಡು: ಆಟೋ ರಿಕ್ಷಾ ಚಾಲಕ ಅಬ್ದುಲ್ ಸತ್ತಾರ್  ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಪಿ. ಅನೂಬ್ ರನ್ನು ಚಂದೇರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page