ವಾರಣಾಸಿ: ಉತ್ತರಪ್ರದೇಶದ ವಾರಣಾಸಿ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯೊಳಗೆ ನಡೆಸಲಾಗುತ್ತಿರುವ ಪೂಜೆಯನ್ನು ಮುಂದುವರಿಸಬಹುದೆಂದು ಅಲಹಾಬಾದ್ ಹೈಕೋರ್ಟ್ ಇಂದು ಬೆಳಿಗ್ಗೆ ಮಹತ್ವದ ತೀರ್ಪು ನೀಡಿದೆ.
ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಿದ ಕೆಳ ನ್ಯಾಯಾಲಯದ ತೀರ್ಪಿ ನ ವಿರುದ್ಧ ತಡೆಯಾಜ್ಞೆ ಹೊರಡಿಸಬೇಕು ಮತ್ತು ಪೂಜೆಗೆ ನೀಡಲಾಗಿರುವ ಅನುಮತಿ ರದ್ದುಪಡಿಸಬೇಕೆಂದು ಕೋರಿ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುತ್ತಿರುವ ಅಂಜುಮಾನ್ ಇಂತೇಜಾಮಿಯಾ ಮಸಾಜಿತ್ ಸಮಿತಿ ಫೆ.೧ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯನ್ನು ಹೈಕೋ ರ್ಟ್ ತಳ್ಳಿ ಹಾಕಿದೆ ಮಾತ್ರವಲ್ಲದೆ, ಪೂಜೆ ಮುಂದುವರಿಸಲು ಅವಕಾಶ ವನ್ನೂ ನೀಡಿ ತೀರ್ಪು ನೀಡಿದೆ.
ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯೊಳಗೆ ಪೂಜೆಗೆ ಅವಕಾಶ ನೀಡಿ ಜನವರಿ ೩೧ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಜ್ಞಾನವಾಪಿ ಮಸೀದಿ ಸಮಿತಿ, ವ್ಯಾಸ್‌ಜಿ ಕ ತೆಹ್ಬಾನದಲ್ಲಿ ಪೂಜೆಗೆ ಅವಕಾಶ ನೀಡುವ ತೀರ್ಪಿನ ವಿರುದ್ಧ ಮೊದಲು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅದನ್ನು ತುರ್ತಾಗಿ ಆಲಿಸುವಂತೆ ವಿನಂತಿಸಿಕೊಂಡಿತ್ತು. ಆದರೆ ಅರ್ಜಿ ಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಅದರಿಂದಾಗಿ ಮಸೀದಿ ಸಮಿತಿ ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ಹೈಕೋರ್ಟ್ ಪೂಜೆ ಮುಂದುವರಿಸುವ ಮಹತ್ವದ ತೀರ್ಪನ್ನು ಇಂದು ನೀಡಿದೆ, ಮಾತ್ರವಲ್ಲದೆ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯನ್ನೂ ತಳ್ಳಿಹಾಕಿದೆ.
ಮಸೀದಿ ಆವರಣದ ಒಂದು ಭಾಗವಾದ ವ್ಯಾಸ್‌ಜಿ ತೆಹ್ಬಾನ ನಮ್ಮ ಸ್ವಾಧೀನದಲ್ಲಿದೆಯೆಂದೂ ಅದರೊಳಗೆ ಪೂಜೆ ಮಾಡುವ ಯಾವುದೇ ಹಕ್ಕು ವ್ಯಾಸ್ ಕುಟುಂಬಕ್ಕಾಗಲೀ ಬೇರೆ ಯಾರಿಗೂ ಇಲ್ಲವೆಂಬುದು ಮಸೀದಿ ಸಮಿತಿಯ ನಿಲುವಾಗಿದೆ. ಅದಾಗ್ಯೂ ೧೯೯೩ರ ತನಕ ವ್ಯಾಸ್ ಕುಟುಂಬದವರು ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸುತ್ತಾ ಬಂದಿದ್ದರು. ಬಳಿಕ ರಾಜ್ಯ ಸರಕಾರ ನೀಡಿದ ನಿರ್ದೇಶದ ಮೇರೆಗೆ ೧೯೯೩ರಲ್ಲಿ ಪೂಜಾ ಕ್ರಮಗಳನ್ನು ಸ್ಥಗಿತಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ಶೈಲೇಂದ್ರ ಕುಮಾರ್ ವ್ಯಾಸ್ ಎಂಬವರು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ೩೦ ವರ್ಷದ ಬಳಿಕ ಜಿಲ್ಲಾ ನ್ಯಾಯಾಲಯದಿಂದ ಅನುಕೂಲ ತೀರ್ಮಾನ ಉಂಟಾಗಿತ್ತು. ಅದಕ್ಕೆ ಈಗ ಕೈಹೋರ್ಟ್ ಕೂಡಾ ಅಸ್ತು ನೀಡಿದೆ.