ವಾರ್ಡ್ ವಿಭಜನೆ ವಿಧೇಯಕಕ್ಕೆ ಚರ್ಚೆ ಇಲ್ಲದೆ ವಿಧಾನಸಭೆಯ ಅನುಮೋದನೆ
ತಿರುವನಂತಪುರ: ಸ್ಥಳೀಯಾ ಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ ಹಾಗೂ ವಾರ್ಡ್ಗಳ ಸಂಖ್ಯೆ ಹೆಚ್ಚಿಸುವ ವಿಧೇಯಕವನ್ನು ವಿಷಯ ಸಮಿತಿಯ ಪರಿಶೀಲನೆ ಬಿಡುವು ದಾಗಲೀ, ಯಾವುದೇ ರೀತಿಯ ಚರ್ಚೆಗೂ ಒಳಪಡಿಸದೆ ರಾಜ್ಯ ವಿಧಾನಸಭೆ ಅದಕ್ಕೆ ಅನು ಮೋದನೆ ನೀಡಿದೆ. ಈ ವಿಧೇಯ ಕವನ್ನು ವಿಧಾನಸಭೆಯಲ್ಲಿ ಮಂಡಿ ಸುವ ಮೊದಲು ಅದನ್ನು ವಿಧಾನ ಸಬೆಯ ವಿಷಯ ಸಮಿತಿಯ ಪರಿ ಶೀಲನೆಗಾಗಿ ಕಳುಹಿಸಿಕೊಡಲಾಗುವುದೆಂದು ವಿಧಾನಸಭೆಯ ಕಾರ್ಯಸೂಚಿಯಲ್ಲಿ ತಿಳಿಸಲಾಗಿತ್ತಾದರೂ ಅದಕ್ಕೂ ತಯಾರಾಗದೆ ಮಾತ್ರವಲ್ಲ ಆ ವಿಧೇಯಕದ ಬಗ್ಗೆ ಯಾವುದೇ ರೀತಿಯ ಚರ್ಚೆಯನ್ನೂ ನಡೆಸದೆ ಅದಕ್ಕೆ ನಿಮಿಷಮಾತ್ರದಲ್ಲಿ ಅನುಮೋದನೆ ನೀಡಲಾಯಿತು.
ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ಎಂ.ಬಿ. ರಾಜೇಶ್ ಅವರು ಈ ವಿಧೇಯಕವನ್ನು ಅಂಗೀಕಾ ರಕ್ಕಾಗಿ ಸದಸ್ಯರ ಮುಂದಿರಿಸಿದ್ದರು. ಅದನ್ನು ಪ್ರತಿಭಟಿಸಿ ವಿಪಕ್ಷಗಳು ವಿಧಾನಸಭಾ ಅಧ್ಯಕ್ಷರ ಪೀಠವನ್ನು ಸುತ್ತುವರಿದು ಮುಗಿಲು ಮುಟ್ಟುವ ಘೋಷಣೆ ಮೊಳಗಿಸಿದರು. ಅದ್ಯಾವುದಕ್ಕೂ ಜಗ್ಗದೆ ಯಾವುದೇ ರೀತಿಯ ಚರ್ಚೆಗಳೂ ಇಲ್ಲದೆ ಕೆಲವೇ ನಿಮಷಗಳೊಳಗೆ ಆಡಳಿತ ಪಕ್ಷಗಳು ಒಮ್ಮತದ ವಿಧೇ ಯಕಕ್ಕೆ ಅಂಗೀಕಾರ ನೀಡಿದರು.ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಅದರ ಮೊದಲು ವಾರ್ಡ್ ವಿಭಜಿಸಿ ಹಾಗೂ ವಾರ್ಡ್ಗಳ ಸಂಖ್ಯೆ ಹೆಚ್ಚಿಸುವ ಪ್ರಕ್ರಿಯೆಗಳು ಮುಗಿಯಲಿದೆ