ವಾಹನಗಳಲ್ಲಿ ಕೂಲಿಂಗ್ ಫಿಲಿಂ ಲಗತ್ತಿಸುವುದಕ್ಕೆ ಹೈಕೋರ್ಟ್ ಅನುಮತಿ
ಕೊಚ್ಚಿ: ಮೋಟಾರು ವಾಹನಗಳಲ್ಲಿ ಅಂಗೀಕೃತ ವ್ಯವಸ್ಥೆಗಳಿಗೆ ಅನುಸಾರವಾಗಿ ಕೂಲಿಂಗ್ ಫಿಲಿಂ ಲಗತ್ತಿಸುವುದಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಇದರ ಹೆಸರಲ್ಲಿ ಕಾನೂನುಕ್ರಮ ಸ್ವೀಕರಿಸಲೋ, ದಂಡ ವಿಧಿಸಲೋ ಅಧಿಕಾರಿಗಳಿಗೆ ಅವಕಾಶವಿಲ್ಲವೆಂದು ಜಸ್ಟೀಸ್ ಎನ್. ನಗರೇಶ್ ಸ್ಪಷ್ಟಪಡಿಸಿದ್ದಾರೆ. ಕೂಲಿಂಗ್ ಫಿಲಿಂ ನಿರ್ಮಿಸುವ ಕಂಪೆನಿ, ಕೂಲಿಂಗ್ ಫಿಲಿಂ ಅಂಟಿಸಿರುವುದಕ್ಕೆ ದಂಡ ಹೇರಿದ ವಿರುದ್ಧ ವಾಹನ ಮಾಲಕ, ಸನ್ ಕಂಟ್ರೋಲ್ ಫಿಲಿಂ ವ್ಯಾಪಾರ ನಡೆಸುವ ಹೆಸರಲ್ಲಿ ನೋಂದಾವಣೆ ರದ್ದುಗೊಳಿಸಲಾಗುವುದೆಂದು ಮೋಟಾರು ವಾಹನ ಇಲಾಖೆ ನೋಟೀಸು ನೀಡಿದ ಸಂಸ್ಥೆ ಜಂಟಿಯಾಗಿ ಸಲ್ಲಿಸಿದ ಅರ್ಜಿಯಲ್ಲಿ ಹೈಕೋರ್ಟ್ ಈ ತೀರ್ಪು ನೀಡಿದೆ.
2021 ಎಪ್ರಿಲ್ 1ರಿಂದ ಜ್ಯಾರಿಗೆಬಂದ ಕೇಂದ್ರ ಮೋಟಾರು ವಾಹನ ಕಾಯ್ದೆಗಳ ವಿಭಾಗ 100ರ ತಿದ್ದುಪಡಿ ಅನುಸಾರ ಮೋಟಾರು ವಾಹನಗಳ ಮುಂಭಾಗದಲ್ಲಿ, ಹಿಂಭಾಗದಲ್ಲಿ, ಬದಿಗಳಲ್ಲಿ ಸೇಫ್ಟಿ ಗ್ಲಾಸ್‌ಗಳಿಗೆ ಬದಲಾಗಿ ‘ಸೇಫ್ಟಿ ಗ್ಲೇಸಿಂಗ್’ ಕೂಡಾ ಉಪಯೋಗಿಸಲು ಅವಕಾಶ ನೀಡುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್‌ನ 2019ರ ಮಾನದಂಡಗಳಿಗೆ ಅನುಸಾರವಾಗಿ ಸೇಫ್ಟಿ ಗ್ಲೇಸಿಂಗ್‌ಗೆ ಅನುಮತಿ ನೀಡಲಾಗಿದೆ. ಸೇಫ್ಟಿ ಗ್ಲಾಸ್‌ನ ಒಳಪದರಿನಲ್ಲಿ ಪ್ಲಾಸ್ಟಿಕ್ ಫಿಲಿಂ ಅಂಟಿಸಿರುವ ಸೇಫ್ಟಿ ಗ್ಲೇಸಿಂಗ್‌ನ ನಿರ್ವಚನದಲ್ಲಿ ಇದನ್ನು ಒಳಪಡಿಸಲಾಗಿದೆ. ಮುಂಭಾಗದಲ್ಲಿ 70 ಶೇಕಡಾ, ಬದಿಗಳಲ್ಲಿ 50 ಶೇಕಡಾ ಪಾರದರ್ಶಕವಾಗಿರ ಬೇಕೆಂದು ತಿದ್ದುಪಡಿ ಕಾಯ್ದೆಯಲ್ಲಿ ಹೇಳಲಾಗಿತ್ತು. ಈ ತಿದ್ದುಪಡಿಯ ಅನುಸಾರ ಈ ರೀತಿಯ ಫಿಲಿಂಗಳನ್ನು ಉಪಯೋಗಿಸುವುದು ಕಾನೂನುಪರವಾಗಿದೆಯೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.