ವಾಹನಗಳ ದಾಖಲು ಪತ್ರಗಳಲ್ಲಿ ಆಧಾರ್ ಕಾರ್ಡ್ ಆಧಾರಿತ ಮೊಬೈಲ್ ನಂಬ್ರ ನೋಂದಾವಣೆ ಕಡ್ಡಾಯಗೊಳಿಸಲು ತೀರ್ಮಾನ
ಕಾಸರಗೋಡು: ವಾಹನಗಳ ಮಾಲಕರ ಅರಿವಿಲ್ಲದೆ ಅವರ ವಾಹನ ಗಳನ್ನು ಇತರರಿಗೆ ಹಸ್ತಾಂತರಿಸುವುದನ್ನು ತಡೆಗಟ್ಟಲು ವಾಹನಗಳ ದಾಖಲು ಪತ್ರಗಳಲ್ಲಿ ಅದರ ಮಾಲಕನ ಆಧಾರ್ ಕಾರ್ಡ್ ಆಧಾರಿತ ಮೊಬೈಲ್ ಫೋನ್ ನಂಬ್ರಗಳನ್ನು ಮಾತ್ರವೇ ಇನ್ನು ಕಡ್ಡಾಯ ವಾಗಿ ಒಳಪಡಿಸಲು ಮೋಟಾರು ವಾಹನ ಇಲಾಖೆ ತೀರ್ಮಾನಿಸಿದೆ.
ಈಗ ವಾಹನಗಳ ನೋಂದಾವಣೆ (ರಿಜಿಸ್ಟ್ರೇಶನ್ ನಡೆಸುವ ವೇಳೆ ಅದ್ಯಾವುದೇ ಮೊಬೈಲ್ ಫೋನ್ ನಂಬ್ರಗಳನ್ನು ಬೇಕಾದರೂ ಅದರಲ್ಲಿ ದಾಖಲಿಸಬಹುದಾಗಿದೆ. ಆ ನಂಬ್ರ ಮಾತ್ರವೇ ಆರ್‌ಸಿ ಪುಸ್ತಕದಲ್ಲಿ ದಾಖ ಲಾಗುತ್ತದೆ. ಇನ್ನು ಇಂತಹ ಸಂಪ್ರದಾ ಯಕ್ಕೆ ವಿದಾಯ ಹಾಡಿ ಆಧಾರ್ ಕಾರ್ಡ್ ಆಧಾರಿತ ಮೊಬೈಲ್ ನಂಬ್ರ ವನ್ನು ಮಾತ್ರವೇ ಇನ್ನು ವಾಹನಗಳ ನೋಂದಾವ ಣೆಯ ವೇಳೆ ನೀಡಬೇಕು. ಅದನ್ನು ನೀಡದೇ ಇದ್ದಲ್ಲಿ ಇನ್ನು ಅಂ ತಹ ವಾಹನ ನೋಂದಾವಣೆ ನಡೆಯದು. ವಾಹನ ಮಾಲಕರ ಅರಿವು ಇಲ್ಲದೆ ಅವರ ವಾಹನಗಳನ್ನು ಇತರರಿಗೆ ಹಸ್ತಾಂತರಿಸಿ ವಂಚನೆ ಪ್ರಕರಣಗಳು ಇತ್ತೀಚೆಗಿನಿಂದ ಹೆಚ್ಚಾಗತೊಡಗಿವೆ. ಅದನ್ನು ತಡೆಗಟ್ಟಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಹಲವು ದೂರುಗಳು ರಾಜ್ಯ ಹೈಕೋರ್ಟ್‌ಗೆ ಸಲ್ಲಿಸಲ್ಪಟ್ಟಿವೆ. ಅದನ್ನು ಪರಿಶೀಲಿಸಿದ ನ್ಯಾಯಾಲಯ ಇನ್ನು ಮುಂದೆ ವಾಹನಗಳ ನೋಂದಾವಣೆ ನಡೆಸುವ ವೇಳೆ ಅಂತಹ ವಾಹನಗಳ ಮಾಲಕನ ಆಧಾರ್ ಕಾರ್ಡ್ ಆಧಾರಿತ ಮೊಬೈಲ್ ಫೋನ್ ನಂಬ್ರವನ್ನು ಮಾತ್ರವೇ ಒಳಪಡಿಸುವಂತೆ ಮೋಟಾರು ವಾಹನ ಇಲಾಖೆಗೆ ನಿರ್ದೇಶ ನೀಡಿದೆ. ಅದರಂತೆ ಮೋಟಾರು ವಾಹನ ಇಲಾಖೆ ಈ ನೂತನ ಕ್ರಮಕ್ಕೆ ಮುಂದಾಗಿದೆ.
ಇದು ಜ್ಯಾರಿಗೊಂಡಲ್ಲಿ ಯಾವುದೇ ವಾಹನಗಳನ್ನು ಬೇರೆಯವರಿಗೆ ಹಸ್ತಾಂತರಿಸುವ ವೇಳೆ ಆ ಸಂದೇಶ ಅದರ ಅಸಲಿ ಮಾಲಕನ ಮೊಬೈಲ್ ಫೋನ್‌ಗೆ ಲಭಿಸಲಿದೆ. ಇದರಿಂದ ಮಾಲಕನಿಗೆ ತಿಳಿಯದೇ ವಾಹನವನ್ನು ಇತರರಿಗೆ ಹಸ್ತಾಂತರಿಸುವುದನ್ನು ತಡೆಗಟ್ಟಬಹುದಾಗಿದೆ.