ವಾಹನ ಅಪಘಾತದಲ್ಲಿ ಗಾಯಗೊಂಡ ರಿಕ್ಷಾ ಚಾಲಕ ಸಾವು

ಕಾಸರಗೋಡು: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಆಟೋ ರಿಕ್ಷಾ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೊಸದುರ್ಗ ಅರಾಯಿವಡತ್ತಡದ ಬಿ.ಕೆ. ಅಬ್ದುಲ್ಲ ಕುಂಞಿ (54) ಸಾವನ್ನಪ್ಪಿದ ಚಾಲಕ. ಜುಲೈ 3ರಂದು ಕಾಲಿಕಡವಿನಲ್ಲಿ ಅಬ್ದುಲ್ಲ ಕುಂಞಿ ಚಲಾಯಿಸುತ್ತಿದ್ದ ಆಟೋ ರಿಕ್ಷಾ ರೋಡ್ ರೋಲರ್‌ಗೆ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಇವರ ಪುತ್ರ ಸಿನಾನ್ ಕಳೆದ ಮೇ 28ರಂದು ಅರಾಯಿಹೊಳೆಗೆ ಬಿದ್ದು ಸಾವನ್ನಪ್ಪಿದ್ದರು. ದಿ| ಮೊದು- ಕುಂಞಿ ಫಾತಿಮಾ ದಂಪತಿ ಪುತ್ರನಾಗಿರುವ ಮೃತ ಅಬ್ದುಲ್ಲ ಕುಂಞಿ ಪತ್ನಿ ಕಂಸಿಯಾ, ಮಕ್ಕಳಾದ ಅರ್ಶಾನಾ, ಅಫ್ರಿನಾ, ಸಹೋದರ ಇಸ್ಮಾಯಿಲ್, ಹನೀಫಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page