ವಾಹನ ಅಪಘಾತದಲ್ಲಿ ನಟ ಶೈನ್ ಟೋಂ ಚಾಕೊರ ತಂದೆ ಮೃತ್ಯು

ಸೇಲಂ: ವಾಹನ ಅಪಘಾತದಲ್ಲಿ ನಟ ಶೈನ್ ಟೋಂ ಚಾಕೊರವರ ತಂದೆ ಸಿ.ಪಿ. ಚಾಕೊ ನಿಧನ ಹೊಂದಿದರು. ಇಂದು ಮುಂಜಾನೆ ೬ ಗಂಟೆ ವೇಳೆ ಸೇಲಂ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಸಿ.ಪಿ. ಚಾಕೊ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇದೇ ವೇಳೆ ಶೈನ್‌ನ ಬಲಕೈಗೆ ಗಾಯ ಉಂಟಾಗಿದೆ. ತಾಯಿ ಹಾಗೂ ಸಹೋದರ, ಚಾಲಕನಿಗೆ ಸಣ್ಣ ಪುಟ್ಟ ಗಾಯ ಉಂಟಾಗಿದೆ. ಇವರನ್ನು ಧರ್ಮಪುರಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶೈನ್‌ರ ಕೈಗೆ ಆಪರೇಷನ್ ಮಾಡಬೇಕಾಗಿ ಬರಲಿದೆ ಎಂದು ಪ್ರಾಥಮಿಕ ವರದಿ ಲಭಿಸಿದೆ. ಎರ್ನಾಕುಳಂನಿಂದ ಬೆಂಗಳೂರಿಗೆ ರಾತ್ರಿ 10 ಗಂಟೆ ವೇಳೆಗೆ ಇವರು ಪ್ರಯಾಣ ಆರಂಭಿಸಿದ್ದರು. ಮುಂಭಾಗದ ಸೀಟ್‌ನಲ್ಲಿ ಚಾಲಕನ ಬಳಿ ಶೈನ್‌ನ ಸಹೋದರ ಹಾಗೂ ಮಧ್ಯದ ಸೀಟ್‌ನಲ್ಲಿ ತಂದೆ, ತಾಯಿ ಹಾಗೂ ಹಿಂದಿನ ಸೀಟ್‌ನಲ್ಲಿ ಶೈನ್ ಕುಳಿತಿದ್ದರು. ಟ್ರ್ಯಾಕ್ ತಪ್ಪಿ ಆಗಮಿಸಿದ ಲಾರಿ ಶೈನ್‌ರ ಕುಟುಂಬ ಸಂಚರಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

RELATED NEWS

You cannot copy contents of this page