ವಿಜಿಲೆನ್ಸ್ನಿಂದ ‘ಆಪರೇಶನ್ ಪ್ರೈವೇಟ್ ಪ್ರಾಕ್ಟೀಸ್:ಜಿಲ್ಲೆಯ 8 ಸಹಿತ 83 ಸರಕಾರಿ ವೈದ್ಯರುಗಳ ಖಾಸಗಿ ಪ್ರಾಕ್ಟೀಸ್ ಪತ್ತೆ
ಕಾಸರಗೋಡು: ಸರಕಾರಿ ವೈದ್ಯರುಗಳು ಖಾಸಗಿ ಆಸ್ಪತ್ರೆಗಳು ಮತ್ತಿತರೆಡೆಗಳಲ್ಲಿ ಸೇವೆ ನಡೆಸುತ್ತಿರು ವುದನ್ನು ಪತ್ತೆಹಚ್ಚಲು ವಿಜಿಲೆನ್ಸ್ ದಾಳಿ ಕಾಸರಗೋಡು ಸೇರಿದಂತೆ ನಿನ್ನೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ಆಪರೇಶನ್ ಪ್ರೈವೇಟ್ ಪ್ರಾಕ್ಟೀಸ್’ ಎಂಬ ಹೆಸರಲ್ಲಿ ದಾಳಿ ಮತ್ತು ಪರಿಶೀಲನೆ ನಡೆಸಿದೆ.
ಈ ದಾಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ 83 ಸರಕಾರಿ ವೈದ್ಯರುಗಳು ಖಾಸಗಿ ಸೇವೆ ನಡೆಸುವುದನ್ನು ಪತ್ತೆಹಚ್ಚಲಾಗಿದೆ. ರಾಜ್ಯ ಆರೋಗ್ಯ ನಿರ್ದೇಶನಾಲ ಯದ ಆಶ್ರಯದಲ್ಲಿ ಕಾರ್ಯವೆಸ ಗುತ್ತಿರುವ ಆಸ್ಪತ್ರೆಗಳ 64 ವೈದ್ಯರುಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳ 19 ವೈದ್ಯರು ಗಳು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ನಡೆಸುತ್ತಿರುವುನ್ನು ತಪಾಸಣೆಯಲ್ಲಿ ಪತ್ತೆಹಚ್ಚಲಾಗಿದೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅಂಶಗಳು ಒಳಗೊಂಡ ವರದಿಯನ್ನು ಶೀಘ್ರ ಆರೋಗ್ಯ ಇಲಾಖೆಗೆ ಸಲ್ಲಿಸಲಾಗುವು ದೆಂದು ರಾಜ್ಯ ವಿಜಿಲೆನ್ಸ್ ನಿರ್ದೇಶಕ ಕೆ. ವಿನೋದ್ ಕುಮಾರ್ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ನಡೆಸಲಾದ ತಪಾಸಣೆಯಲ್ಲಿ ಎಂಟು ವೈದ್ಯರುಗಳು ಖಾಸಗಿ ಸೇವೆ ನಡೆಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಇದು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ ಒಟ್ಟು 83 ವೈದ್ಯರುಗಳು ಖಾಸಗಿ ಸೇವೆ ನಡೆಸುತ್ತಿರುವುದನ್ನು ಪತ್ತೆಹಚ್ಚ ಲಾಗಿದೆಯೆಂದು ವಿಜಿಲೆನ್ಸ್ ನಿರ್ದೇಶಕರು ತಿಳಿಸಿದ್ದಾರೆ.
ಪರಿಷ್ಕೃತ ಕಾನೂನು ಪ್ರಕಾರ ಸರಕಾರಿ ವೈದ್ಯರುಗಳಿಗೆ ತಮ್ಮ ವಾಸಸ್ಥಳದಲ್ಲಿ ಮಾತ್ರವೇ ಪ್ರೈವೇಟ್ ಪ್ರಾಕ್ಟೀಸ್ ನಡೆಸಬಹುದಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಅವರು ಸೇವೆ ನಡೆಸುವಂತಿಲ್ಲವೆಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.