ವಿದೇಶ ನೇಮಕಾತಿ: ಕೇರಳದಲ್ಲಿ 10,000ದಷ್ಟು ಅನಧಿಕೃತ ನೇಮಕಾತಿ ಸಂಸ್ಥೆಗಳು ಕಾರ್ಯವೆಸಗುತ್ತಿರುವುದು ಪತ್ತೆ
ಕಾಸರಗೋಡು: ವಿದೇಶಗಳಲ್ಲಿ ಉದ್ಯೋಗ ನೀಡುವ ಹೆಸರಲ್ಲಿ ರಾಜ್ಯದಲ್ಲಿ 10,000ದಷ್ಟು ಅನಧಿಕೃತ ರಿಕ್ರೂಟ್‌ಮೆಂಟ್ ಏಜೆನ್ಸಿ (ನೇಮಕಾತಿ ಸಂಸ್ಥೆಗಳು) ಕಾರ್ಯವೆಸಗುತ್ತಿರು ವುದಾಗಿ ಪತ್ತೆಹಚ್ಚಲಾಗಿದೆ. ರಾಜ್ಯದ ನೇಮಕಾತಿ ಏಜೆನ್ಸಿಗಳ ಬಗ್ಗೆ ನೋರ್ಕಾ ರೂಟ್ಸ್ ನಡೆಸಿದ ಪರಿಶೀಲನೆಯಲ್ಲಿ ಇದನ್ನು ಪತ್ತೆಹಚ್ಚಲಾಗಿದೆ. ತಿರುವ ನಂತಪುರ ಪ್ರೊಟೆಕ್ಟರ್ ಆಫ್ ಎಮಿ ಗ್ರಂಟ್ಸ್ ಸಿ ಶ್ಯಾಮ್ ಚಂದ್ ಈ ವಿಷಯ ತಿಳಿಸಿದ್ದಾರೆ. ಅನಧಿಕೃತ ವಿದೇಶ ಉದ್ಯೋಗ ನೇಮಕಾತಿಗಳು, ವಿಸಾ ವಂಚನೆ, ಸ್ಟುಡೆಂಟ್ (ವಿದ್ಯಾರ್ಥಿ) ವಿಸಾ ವಂಚನೆ ಮತ್ತು ವಿಸಿಟಿಂಗ್ ವಿಸಾದಲ್ಲಿ ನಡೆಸಲಾಗುತ್ತಿರುವ ನೇಮಕಾತಿ ಇತ್ಯಾದಿಗಳನ್ನು ನಿಯಂತ್ರಿಸಲು ಹಾಗೂ ಇಂತಹ ಏಜೆನ್ಸಿಗಳಿಗೆ ಲೈಸನ್ಸ್ ಮಂಜೂರು ಮಾಡುವ ಜ್ಯಾರಿಯ ಲ್ಲಿರುವ ಎಮಿಗ್ರೇಷನ್ ಕಾನೂನಿನಲ್ಲಿ ಕೆಲವೊಂದು ಇತಿಮಿತಿಗಳಿವೆಯೆಂದು ಶ್ಯಾಮ್‌ಚಂದ್ ತಿಳಿಸಿದ್ದಾರೆ.