ವಿದೇಶ ಸಂದರ್ಶನ ಬಳಿಕ ಮುಖ್ಯಮಂತ್ರಿ ವಾಪಸ್: ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತಲುಪಿದ್ದುದು ಭದ್ರತಾ ಪೊಲೀಸರು ಮಾತ್ರ
ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿದೇಶ ಸಂz ರ್ಶನದ ಬಳಿಕ ಮರಳಿ ಬಂದಿದ್ದಾರೆ. ದುಬಾ- ತಿರುವನಂತಪುರ ವಿಮಾನದಲ್ಲಿ ಇಂದು ಮುಂಜಾನೆ ೩ ಗಂಟೆಗೆ ಕುಟುಂಬದೊಂದಿಗೆ ಮುಖ್ಯಮಂತ್ರಿ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಮುಖ್ಯಮಂತ್ರಿಯೊಂದಿಗೆ ಪತ್ನಿ ಹಾಗೂ ಮೊಮ್ಮಗನಿದ್ದನು.
ಸಾಮಾನ್ಯವಾಗಿ ವಿದೇಶ ಪ್ರಯಾಣ ಪೂರ್ತಿಗೊಳಿಸಿ ಮರಳುವ ಮುಖ್ಯ ಮಂತ್ರಿಯನ್ನು ಸ್ವಾಗತಿಸಲು ಡಿಜಿಪಿ ಸಹಿತ ಹಿರಿಯ ಪೊಲೀಸ್ ಅಧಿಕಾ ರಿಗಳು ವಿಮಾನ ನಿಲ್ದಾಣಕ್ಕೆ ತಲುಪ ಬೇಕಾಗಿತ್ತು. ಆದರೆ ಇಂದು ಮುಂಜಾನೆ ವಿಮಾನ ನಿಲ್ದಾಣಕ್ಕೆ ಅವರ‍್ಯಾರೂ ತಲುಪಿರಲಿಲ್ಲ. ಮುಖ್ಯಮಂತ್ರಿಯ ಭದ್ರತಾ ಹೊಣೆಗಾರಿಕೆಯುಳ್ಳ ಪೊಲೀಸರು ಮಾತ್ರವೇ ಅಲ್ಲಿದ್ದರು.
ದುಬಾ, ಸಿಂಗಾಪೂರ್, ಇಂಡೋನೇಶ್ಯಾ ಎಂಬೀ ದೇಶಗಳನ್ನು ಸಂದರ್ಶಿಸಿದ ಬಳಿಕ ಮುಖ್ಯಮಂತ್ರಿ ಹಾಗೂ ಕುಟುಂಬ ರಾಜ್ಯಕ್ಕೆ ಮರಳಿದ್ದಾರೆ. ವಿದೇಶ ಪ್ರಯಾಣಕ್ಕೆ ಸಂಬಂಧಿಸಿ ಮಾಧ್ಯಮದವರು ಕೇಳಿದ ಯಾವುದೇ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಉತ್ತರಿಸಿಲ್ಲ. ಈ ತಿಂಗಳ ೬ರಂದು ಮುಖ್ಯಮಂತ್ರಿ ಕುಟುಂಬದೊಂದಿಗೆ ವಿದೇಶಕ್ಕೆ ತೆರಲಿದ್ದರು. ಇದೇ ವೇಳೆ ವಿದೇಶ ಪರ್ಯಟನೆಯಲ್ಲಿರುವ ಮುಖ್ಯಮಂತ್ರಿಯ ಅಳಿಯ ಸಚಿವ ಪಿ.ಎ ಮುಹಮ್ಮದ್ ರಿಯಾಸ್ ಹಾಗೂ ಪತ್ನಿ ವೀಣಾ ನಾಳೆ ಮರಳಿ ಬರಲಿದ್ದಾರೆ. ಇಂದು ದುಬಾಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ಭಾಗವಹಿಸುವರು.
ಮುಖ್ಯಮಂತ್ರಿ ವಿದೇಶಕ್ಕೆ ತೆರಳುವ ವೇಳೆ ಅವರ ಹೊಣೆಗಾರಿಕೆಯನ್ನು ಯಾರಿಗೂ ವಹಿಸಿಕೊಟ್ಟಿರಲಿಲ್ಲ. ಕೇರಳದಲ್ಲಿ ಲೋಕಸಭಾ ಚುನಾವಣೆ ಮುಗಿದ ಕೂಡಲೇ ಮುಖ್ಯಮಂತ್ರಿ ವಿದೇಶಕ್ಕೆ ತೆರಳಿರುವುದರ ವಿರುದ್ಧ ವಿಪಕ್ಷಗಳು ಆರೋಪ ಹೊರಿಸಿದ್ದವು.