ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿದ ಮನೆಯ ಕೀಲಿಕೈ ಹಸ್ತಾಂತರ
ಮೊಗ್ರಾಲ್: ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೆತ್ತವರನ್ನು ಕಳೆದುಕೊಂಡ ಕುಟುಂಬವೊಂದರ ಮೂರು ಮಕ್ಕಳಿಗೆ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿದ ಮನೆಯ ಕೀಲಿ ಕೈಯನ್ನು ರಾಜ್ಯ ಕ್ರೀಡಾ ಸಚಿವ ವಿ. ಅಬ್ದುಲ್ ರಹ್ಮಾನ್ ಹಸ್ತಾಂತರಿಸಿದರು. ಶಾಲಾ ಅಧಿಕಾರಿಗಳು ಸಚಿವರಿಂದ ಕೀಲಿ ಕೈ ಸ್ವೀಕರಿಸಿದರು. ಇದು ಮಾದರಿ ಚಟುವಟಿಕೆ ಎಂದು, ಇದು ಕೇರಳದ ವಿಶೇಷತೆಯಾಗಿದೆ ಎಂದು ಸಚಿವರು ನುಡಿದರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ದ್ದರು. ಮುಖ್ಯೋಪಾಧ್ಯಾಯ ಎಂ.ಎ. ಅಬ್ದುಲ್ ಬಶೀರ್ ವರದಿ ಮಂಡಿಸಿದರು. ಕುಂಬಳೆ ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ, ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲಾ ಅಹಮ್ಮದ್, ಬ್ಲೋಕ್ ಪಂಚಾಯತ್ ಸದಸ್ಯೆ ಸೀನತ್ ನಸೀರ್ ಕಲ್ಲಂಗೈ, ಕುಂಬಳೆ ಪಂ. ಸದಸ್ಯ ಕೆ. ಮೊಹಮ್ಮದ್ ರಿಯಾಸ್, ಪಿಟಿಎ ಅಧ್ಯಕ್ಷ ಅಶ್ರಫ್ ಪೆರುವಾಡ್, ಎಸ್‌ಎಂಸಿ ಅಧ್ಯಕ್ಷ ಆರಿಫ್ ಟಿ.ಎಂ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಸಿ.ಎ. ಸುಬೈರ್, ಟಿ.ಎಂ. ಶುಹೈಬ್, ಸಿ.ಎಂ. ಹಂಸ, ಎಂ. ತಾಜುದ್ದೀನ್, ಅಬ್ಬಾಸ್ ಮೊಗ್ರಾಲ್, ಪ್ರಾಂಶುಪಾಲೆ ಪಾರ್ವತಿ, ಜಾನ್ಸಿದ ಚೆಲ್ಲಪ್ಪನ್, ಸ್ಟಾಫ್ ಸೆಕ್ರೆಟರಿ ವಿ. ಮೋಹನನ್ ಎಂಬಿವರು ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಎ.ಎಂ. ಸಿದ್ದಿಕ್ ರಹ್ಮಾನ್ ಸ್ವಾಗತಿಸಿ, ಸಂಚಾಲಕಿ ಎಫ್.ಎಚ್. ತಸ್ನೀಮ್ ವಂದಿಸಿದರು.
ವಿದ್ಯಾರ್ಥಿಗಳು ಪ್ರತಿದಿನ ಮಿಠಾಯಿ ಖರೀದಿಸಲೆಂದು ತೆಗೆದಿರಿಸಿದ್ದ ಹಣವನ್ನು ತರಗತಿ ಅಧ್ಯಾಪಕರಿಗೆ ನೀಡಿ ಮನೆ ನಿರ್ಮಾಣಕ್ಕೆ ಮೊತ್ತ ಸಂಗ್ರಹಿಸ ಲಾಗಿತ್ತು. ಇದರ ಜೊತೆಯಲ್ಲಿ ಅಧ್ಯಾಪಕರು, ಹೆತ್ತವರು, ಸ್ಥಳೀಯರು ಸಹಕರಿಸಿದರು.