ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ: ವಿ.ವಿ. ಪ್ರಾಧ್ಯಾಪಕನ ವಿರುದ್ಧ ಕೇಸು ದಾಖಲು

ಕಾಸರಗೋಡು: ವಿದ್ಯಾರ್ಥಿನಿ ಯೊಂದಿಗೆ ಅನುಚಿತವಾಗಿ ವರ್ತಿ ಸಿದ ಬಗ್ಗೆ ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದ ಅಧಿಕಾರಿಗಳು ನೀಡಿದ ದೂರಿನಂತೆ ಪ್ರಸ್ತುತ ವಿವಿಯ ಅಸಿಸ್ಟೆಂಟ್ ಪ್ರೊಫೆ ಸರ್ ಡಾ. ಇಫ್ತಿಕರ್ ಅಹಮ್ಮದ್‌ರ ವಿರುದ್ದ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪ್ರಾಧ್ಯಾ ಪಕನನ್ನು ವಿವಿಯ ಆಂತರಿಕ ದೂರು ಪರಿಹಾರ ಸೆಲ್   ಸೇವೆಯಿಂದ ಈ ಹಿಂದೆಯೇ ಅಮಾನತು ಗೊಳಿಸಿತ್ತು.

ಕಳೆದ ನ. ೧೩ರಂದು ಆರೋಪಿ ವಿದ್ಯಾರ್ಥಿನಿಯೋರ್ವೆ ಜತೆ ಅನುಚಿತ ರೀತಿಯಲ್ಲಿ ವರ್ತಿಸಿರು ವುದಾಗಿ ಆಕೆ ವಿವಿಗೆ ದೂರು ನೀಡಿದ್ದಳು. ಅದನ್ನು ಪರಿಶೀಲಿಸಿದ ವಿವಿಯ  ಆಂತರಿಕ ದೂರು ಪರಿಹಾರ ಸೆಲ್ ಬಳಿಕ ಅದನ್ನು   ಬೇಕಲ ಪೊಲೀಸರಿಗೆ ಹಸ್ತಾಂತರಿಸಿತ್ತು. ಅದರಂತೆ ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy contents of this page