ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಲೇಜು ವಿದ್ಯಾರ್ಥಿ ಮನೆಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚೆಂಬರಿಕ ಕೊಟ್ಟುವಳಪ್ಪು ಮಾಣಿ ರಸ್ತೆ ಬಳಿಯ ಅಬ್ದುಲ್ಲ ಕುಂಞಿ-ಹಪ್ಸತ್ತ್ ದಂಪತಿ ಪುತ್ರ  ಹಿಷಾಂ ಅಬ್ದುಲ್ ಸಲಾಂ (21) ಸಾವನ್ನಪ್ಪಿದ ಯುವಕ.

ಸೀತಾಂಗೋಳಿ ಮಾಲಿಕ್ ದೀನಾರ್ ಕಾಲೇಜಿನಲ್ಲಿ ಟ್ರಾವೆಲ್ ಆಂಡ್ ಟೂರಿಸಂ ಮೆನೇಜ್‌ಮೆಂಟ್ ವಿದ್ಯಾರ್ಥಿಯಾಗಿರುವ ಹಿಷಾಂ ನಿನ್ನೆ ಬೆಳಿಗ್ಗೆ ಸ್ನೇಹಿತರೊಂದಿಗೆ ಮನೆಯಿಂದ ಹೊರಗೆ ಹೋಗಿ ಹಿಂತಿರುಗಿ ಚಹಾ ಕುಡಿದು  ಬಳಿಕ ಬೆಡ್‌ರೂಂಗೆ ಹೋಗಿ ದ್ದನ.  ಮಧ್ಯಾಹ್ನವಾದರೂ ಕೊಠಡಿ ಯಿಂದ ಆತ ಹೊರಬಾರದಿರುವುದನ್ನು ಗಮನಿಸಿದ ಮನೆಯವರು ಹೋಗಿ ನೋಡಿದಾಗ ಕೊಠಡಿಯೊಳಗೆ ನೇಣುಬಿಗಿದ ಸ್ಥಿತಿ ಯಲ್ಲಿ ಪತ್ತೆ ಹಚ್ಚಿದ್ದಾರೆ. ಮೇಲ್ಪರಂಬ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದರು.

ಮೃತರು ಹೆತ್ತವರ ಹೊರತಾಗಿ ಸಹೋದರ-ಸಹೋದರಿಯರಾದ ಅರ್ಶಾದ್, ಹಾಶಿಂ, ಹಿದಾಯ ತುಲ್ಲಾ, ಫಾತಿಮಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page