ವಿದ್ಯುತ್ ಇಲಾಖೆಯ ಗುತ್ತಿಗೆ ಜೀಪ್‌ಗೆ ವಿಶ್ರಾಂತಿ: ಗ್ರಾಹಕರು ಸಂಕಷ್ಟದಲ್ಲಿ
ಮಂಜೇಶ್ವರ : ಮಂಜೇಶ್ವರ ವಿದ್ಯುತ್ ಸೆಕ್ಷನ್ ಕಚೇರಿಯಲ್ಲಿ ತುರ್ತು ಸಂದರ್ಭಗಳಲ್ಲಿ ಅನಾಹುತಗಳನ್ನು ತಪ್ಪಿಸಲು ವಿದ್ಯುತ್ ಸಿಬ್ಬಂದಿಗಳನ್ನು ಕೊಂಡೊಯ್ಯಬೇಕಾದ ಗುತ್ತಿಗೆ ಜೀಪ್ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾ ಗಿರುವುದಾಗಿ ಗ್ರಾಹಕರಿಂದ ಆರೋಪ ಕೇಳಿ ಬಂದಿದೆ. ಮಂಜೇಶ್ವರ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ಹಲವು ಕಾರಣಗಳಿಂದ ಮೊಟಕುಗೊಳ್ಳುತ್ತಿ ರುವ ವಿದ್ಯುತ್ತನ್ನು ಮರು ಸ್ಥಾಪಿಸಲು ಸಿಬ್ಬಂದಿಗಳಿಗೆ ವಾಹನದ ಸೌಕರ್ಯ ವಿಲ್ಲದೆ ಗ್ರಾಹಕರು ತಾಸುಗಳ ತನಕ ಕತ್ತಲಲ್ಲಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಗುತ್ತಿಗೆ ವಾಹನದ ಚಾಲಕ ಜೀಪನ್ನು ವಿದ್ಯುತ್ ಇಲಾಖೆ ಯಲ್ಲಿ ನಿಲುಗಡೆಗೊಳಿಸದೆ ವೈಯುಕ್ತಿಕ ಅಗತÀ್ಯಕ್ಕೆ ಬಳಸುತ್ತಿದ್ದಾನೆಂಬ ಆರೋಪ ಕೂಡಾ ಕೇಳಿ ಬಂದಿದೆ. ವಿಷು ಮೊz Àಲಿನ ರಾತ್ರಿ ಮಂಜೇಶ್ವರದ ಹಲವೆಡೆ ಸಂಜೆ 6.30ರಿಂದ ರಾತ್ರಿ 10 ತನಕ ವಿದ್ಯುತ್ ಮೊಟಕುಗೊಂಡಿದ್ದು ಈ ಬಗ್ಗೆ ಗ್ರಾಹಕರು ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ದಾಗ ನಮಗೆ ಬರಲು ಜೀಪ್ ಇಲ್ಲವೆಂಬ ಉತ್ತರ ಲಭಿಸುತಿತ್ತೆನ್ನ ಲಾಗಿದೆ. ಇದು ಮಂಜೇಶ್ವರ ವಿದ್ಯುತ್ ಸೆಕ್ಷನ್‌ನ ಪ್ರತಿನಿತ್ಯದ ಕತೆಯಾಗಿದ್ದು ಜೀಪ್ ಚಾಲಕನ ಕರ್ತವ್ಯ ಲೋಪಕ್ಕೆ ಗ್ರಾಹಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ವಿದ್ಯುತ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿ ರುವುದಾಗಿ ಮಂಜೇಶ್ವರ ಗ್ರಾಹಕವೇದಿಕೆ ಕಾರ್ಯದರ್ಶಿ ತಿಳಿಸಿದ್ದಾರೆ.