ಕಾಸರಗೋಡು: ವಿದ್ಯಾನಗರದ ಕುಟುಂಬ ನ್ಯಾಯಾಲಯ ಸಮೀಪ ಉಳಿಯತ್ತಡ್ಕ ರಸ್ತೆ ಬದಿಯ 100 ಕೆವಿ ವಿದ್ಯುತ್ ಟ್ರಾನ್ಸ್ ಫಾರ್ಮರ್‌ನಲ್ಲಿ ನಿನ್ನೆ ದಿಢೀರ್ ಬೆಂಕಿ ಎದ್ದು ಭಾರೀ ಭೀತಿ ಸೃಷ್ಟಿಸಿದೆ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವೇಣು ಗೋಪಾಲ್‌ರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರ. ಇದರಿಂದ ವಿದ್ಯುತ್ ಇಲಾಖೆಗೆ ಭಾರೀ ನಷ್ಟ ಉಂಟಾಗಿದೆ. ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ತಗಲಿಕೊಂಡಿರುವುದರಿಂದಾಗಿ ಗಂಟೆಗಳ ತನಕ ವಿದ್ಯುತ್ ಪೂರೈಕೆ ಮೊಟಕುಗೊಂಡಿತು.
