ವಿದ್ಯುತ್ ಟ್ರಾನ್ಸ್ ಫಾರ್ಮರ್‌ನಿಂದ ನಾಮಫಲಕ ಕಳವು

ಕುಂಬ್ಡಾಜೆ: ವಿದ್ಯುತ್ ಟ್ರಾನ್ಸ್ ಫಾರ್ಮರ್‌ನಲ್ಲಿ ಸ್ಥಾಪಿಸಿದ್ದ ನಾಮಫಲಕವನ್ನು ಕಳ್ಳರು  ಕದ್ದೊಯ್ದ ಘಟನೆ ನಡೆದಿದೆ. ಬಂದ್ಯೋಡು ಅಡ್ಕ ದಲ್ಲಿರುವ ಟ್ರಾನ್ಸ್ ಫಾರ್ಮರ್‌ನಲ್ಲಿ ಅಳ ವಡಿಸಿದ್ದ ನಾಮಫಲಕ ನಾಪತ್ತೆಯಾಗಿ ರುವುದು ನಿನ್ನೆ ಮಧ್ಯಾಹ್ನ ವೇಳೆ ಅರಿವಿಗೆ ಬಂದಿದೆ.  ಬಳಿಕ ಪರಿಶೀಲಿಸಿದಾಗ ಅದನ್ನು ಕಳ್ಳರು ದೋಚಿದ್ದಾರೆದೆಂದು ಅಂದಾಜಿಸಲಾಗಿದೆಯೆಂದು ಕೆಎಸ್ ಇಬಿ ಉಪ್ಪಳ ಸೆಕ್ಷನ್‌ನ ಅಸಿಸ್ಟೆಂಟ್ ಇಂಜಿನಿಯರ್ ರೋಯ್ ತಿಳಿಸಿದ್ದಾರೆ. ಈ ಬಗ್ಗೆ ಇವರು ನೀಡಿದ ದೂರಿನಂತೆ  ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page