ವಿದ್ಯುತ್ ತಂತಿಗೆ ಆವರಿಸಿಕೊಂಡ ಕಾಡು ಬಳ್ಳಿಗಳು: ಚೂರಿತ್ತಡ್ಕದಲ್ಲಿ ಅಪಾಯಭೀತಿ
ಕುಂಬಳೆ: ಕುಂಬಳೆ ಪಂಚಾಯ ತ್‌ನ ಎಂಟನೇ ವಾರ್ಡ್‌ನಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳು ತೋರಿಸಿದ ಜಾಗ್ರತೆಯನ್ನು ಐದನೇ ವಾರ್ಡಾದ ಚೂರಿತ್ತಡ್ಕ ಸಂತೋಷ್‌ನಗರದಲ್ಲೂ ತೋರಿಸಬೇಕೆಂದು ನಾಗರಿಕರು ಆಗ್ರಹಪಡುತ್ತಿದ್ದಾರೆ.
ಚೂರಿತ್ತಡ್ಕ ಸಂತೋಷ್‌ನಗರದಲ್ಲಿ ಕಾಡುಬಳ್ಳಿಗಳು ವಿದ್ಯುತ್ ಕಂಬಕ್ಕೆ ಆವರಿಸಿಕೊಂಡಿದೆ. ಕಾಡುಬಳ್ಳಿಗಳು ವಿದ್ಯುತ್ ಕಂಬದಿಂದ ತಂತಿಗೆ ತಲುಪಿದೆ. ಮಳೆ ಸುರಿಯುವ ವೇಳೆ ಈ ಬಳ್ಳಿಗಳ ಮೂಲಕ ವಿದ್ಯುತ್ ಹರಿಯಲು ಸಾಧ್ಯತೆಯಿದ್ದು, ಇದು ಆತಂಕ ಮೂಡಿಸುತ್ತಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.
ಇದೇ ರೀತಿ ಎಂಟನೇ ವಾರ್ಡ್‌ನಲ್ಲಿ ವಿದ್ಯುತ್ ಕಂಬದಲ್ಲಿ ಕಾಡು ಬಳ್ಳಿಗಳು ಆವರಿಸಿಕೊಂಡಿರುವ ಬಗ್ಗೆ ‘ಕಾರವಲ್’ ಮೀಡಿಯ ವರದಿ ಮಾಡಿತ್ತು. ಅದನ್ನು ಗಮನಿಸಿದ ವಿದ್ಯುತ್ ಇಲಾಖೆ ನೌಕರರು ತಕ್ಷಣ ತಲುಪಿ ವಿದ್ಯುತ್ ಕಂಬದಿಂದ ಕಾಡು ಬಳ್ಳಿಗಳನ್ನು ತೆರವುಗೊಳಿಸಿದರು. ಅದೇ ರೀತಿ ಚೂರಿ ತ್ತಡ್ಕದಲ್ಲೂ ಅಪಾಯ ಭೀತಿಯೊಡ್ಡುತ್ತಿ ರುವ ಕಾಡು ಬಳ್ಳಿಗಳನ್ನು ವಿದ್ಯುತ್ ಕಂಬದಿಂದ ತೆರವುಗೊಳಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.