ವಿದ್ಯುತ್ ದರ ಏರಿಕೆ ಪಕ್ಕಾ: ಇಂದು ಸಂಜೆ ವಿದ್ಯುಕ್ತ ಘೋಷಣೆ
ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಹೆಚ್ಚುಕಡಿಮೆ ಪಕ್ಕಾಗೊಂಡಿದೆ. ಇದರ ವಿದ್ಯುಕ್ತ ಘೋಷಣೆಯನ್ನು ವಿದ್ಯುತ್ ನಿಯಂತ್ರಣ ಆಯೋಗ (ರೆಗ್ಯುಲೇಟರಿ ಕಮಿಶನ್) ಇಂದು ಸಂಜೆ ಮಾಡಲಿದೆ.
ವಿದ್ಯುತ್ ದರ ಹೆಚ್ಚಳದ ಪೂರ್ವಭಾವಿಯಾಗಿ ವಿದ್ಯುತ್ ನಿಯಂತ್ರಣ ಆಯುಕ್ತರು ನಿನ್ನೆ ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಯೂನಿಟ್‌ವೊಂದಕ್ಕೆ 10 ಪೈಸೆಯಿಂದ 20 ಪೈಸೆ ತನಕ ಏರುವ ಸಾಧ್ಯತೆ ಇದೆ. ಆದರೆ ತಿಂಗಳಿಗೆ 50 ಯೂನಿಟ್‌ನಷ್ಟು ವಿದ್ಯುತ್ ಬಳಸುವ ಫಲಾನುಭವಿಗಳನ್ನು ದರ ಏರಿಕೆಯಿಂದ ಹೊರತುಪಡಿಸುವ ವಿಷಯ ಆಯೋಗದ ಪರಿಶೀಲನೆಯಲ್ಲಿದೆ. ಇದೇ ರೀತಿ ಉಚಿತವಾಗಿ ನೀಡುವ ವಿದ್ಯುತ್‌ನ್ನು ಇನ್ನಷ್ಟು ವಿಭಾಗಗಳಿಗೆ ವಿಸ್ತರಿಸುವ ಸಾಧ್ಯತೆಯೂ ಇದೆ. ವಿದ್ಯುತ್ ದರ ಏರಿಸಿದರೂ ಬೇಸಿಗೆ ಕಾಲದಲ್ಲಿ ವಿದ್ಯುತ್ ಬಳಕೆ ಹೆಚ್ಚುತ್ತಿ ರುವುದನ್ನು ಗಮನಿಸಿ ಅದಕ್ಕೆ ಹೊಂದಿಕೊಂಡು ಆ ಅವಧಿಯಲ್ಲಿ ಯೂನಿಟ್‌ವೊಂದರ ದರದಲ್ಲಿ ಮತ್ತೆ ತಲಾ 10 ಪೈಸೆಯಂತೆ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ವಿದ್ಯುನ್ಮಂಡಳಿ ಮುಂದಿರಿಸಿದ್ದು, ಅದನ್ನು ಆಯೋಗ ಅಂಗೀಕರಿಸುವ ಸಾಧ್ಯತೆ ವಿರಳ
ವಾಗಿದೆ.
ರಾಜ್ಯದಲ್ಲಿ ವಿದ್ಯುತ್ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಒಟ್ಟು ಅಗತ್ಯದ ವಿದ್ಯುತ್ ಪೈಕಿ ಶೇ. 30ರಷ್ಟನ್ನು ಮಾತ್ರವೇ ರಾಜ್ಯದಲ್ಲಿ ಆಂತರಿಕವಾಗಿ ಉತ್ಪಾದಿಸಲಾಗುತ್ತಿದೆ. ಬಾಕಿ ವಿದ್ಯುತ್‌ನ್ನು ದುಂದು ಬೆಲೆ ನೀಡಿ ಹೊರಗಡೆಯಿಂದ ಪಡೆಯಲಾಗುತ್ತಿದೆ. ಇದು ವಿದ್ಯುನ್ಮಂಡಳಿಗೆ ಭಾರೀ ಆರ್ಥಿಕ ಹೊಡೆತ ನೀಡುತ್ತಿದೆ. ಅದರಿಂದಾಗಿ ವಿದ್ಯುತ್ ದರ ಏರಿಕೆ ಅನಿ ವಾರ್ಯವಾಗಿದೆಯೆಂದು ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.