ವಿದ್ಯುತ್ ಬೋರ್ಡ್‌ನ ಆಂತರಿಕ ದೂರು ಪರಿಹಾರ ಸೆಲ್ ಉದ್ಘಾಟನೆ ನಾಳೆ

ಕಾಸರಗೋಡು: ವಿದ್ಯುತ್ ಗ್ರಾಹಕರ ಸೇವಾ  ಕಾನೂನಿನಂಗವಾಗಿ ಕೇರಳದ ವಿದ್ಯುತ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದಕ್ಕಾಗಿ ಕೆಎಸ್‌ಇಬಿಯ ಅಧೀ ನದಲ್ಲಿ ಆಂತರಿಕ ದೂರು ಪರಿಹಾರ ಸೆಲ್ ರೂಪೀಕರಿಸಲಾಗುವುದು. ಇದರಂಗವಾಗಿ ಕಾಸರಗೋಡು ಇಲೆಕ್ಟ್ರಿಕಲ್ ಸರ್ಕಲ್‌ನ ಅಧೀನದಲ್ಲಿ ಸೆಲ್‌ನ ಉದ್ಘಾಟನೆ ನಾಳೆ ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ವಿದ್ಯುತ್ ಭವನದ ಸಭಾಂಗಣದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ನೆರವೇರಿಸುವರು.

ಶಾಸಕರಾದ ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್, ಎಂ. ರಾಜಗೋಪಾಲನ್, ಎಕೆಎಂ ಅಶ್ರಫ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ಬ್ಲೋಕ್, ಗ್ರಾಮ ಪಂಚಾಯತ್, ನಗರಸಭಾ ಅಧ್ಯಕ್ಷರು, ಜನಪ್ರತಿನಿಧಿಗಳು, ವ್ಯಾಪಾರಿಗಳು, ಬಳಕೆದಾರರ ಸಂಘಟನೆಗಳ ಪ್ರತಿನಿಧಿಗಳು ಸಹಿತ ಹಲವರು ಭಾಗವಹಿಸುವರು.

You cannot copy contents of this page