ವಿದ್ಯುತ್ ವಾಹನ: 20 ಕಿ.ಮೀ.ಗೆ ಒಂದರಂತೆ ಚಾರ್ಜಿಂಗ್ ಸ್ಟೇಶನ್
ಕಾಸರಗೋಡು: ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗಿರುವ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿರು ವಂತೆಯೇ ಇದನ್ನು ಮನಗಂಡು 2025ರೊಳಗಾಗಿ ದೇಶದ ಪ್ರತೀ 20 ಕಿಲೋ ಮೀಟರ್‌ಗಳಿಗೊಂದರಂತೆ ವಿದ್ಯುತ್ ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸುವ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರ ರೂಪು ನೀಡಿದೆ.
ಇದಕ್ಕೆ ಹೊಂದಿಕೊಂಡು ಕೇಂದ್ರ ಇಂಧನ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಇನ್ನು ನಗರಪ್ರದೇಶಗಳಿಗೂ ಇನ್ನಷ್ಟು ಹೆಚ್ಚು ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸಲಾಗುವುದು. ಇದು ಮಾತ್ರವಲ್ಲದೆ 2030ರಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ರತೀ 100 ಕಿ.ಮೀ. ಅಂತರದಲ್ಲಿ ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸಲಾಗುವುದು. ಇಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಶನ್‌ಗಳನ್ನು ನಿರ್ಮಿಸಲಾಗುವುದು. ಸರಕಾರಿ ಭೂಮಿಯಲ್ಲಿ ಖಾಸಗಿ ಸಂಸ್ಥೆಗಳಿಗೂ ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸುವ ಅವಕಾಶವನ್ನು ನೀಡಲಾಗುವುದು. ಹಾಗೆ ನಡೆದಲ್ಲಿ ಇದರ ಆದಾಯ ವನ್ನು ನಿಗದಿತ ಪ್ರಮಾಣದಲ್ಲಿ ಹಂಚಬೇಕಾಗಿ ಬರಲಿದೆ.