ಕೊಚ್ಚಿ: ರಾಜ್ಯ ವಿಧಾನಸಭೆ ಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ್ (ಆರ್ಎಸ್ಎಸ್)ನ ವಿರುದ್ಧ ಕೆಲವರು ನಿರಂತರವಾಗಿ ಅವಹೇಳನ ಕಾರಿ ಹೇಳಿಕೆ ನೀಡುತ್ತಿದ್ದು, ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಲಾಗು ವುದೆಂದು ಆರ್ಎಸ್ಎಸ್ನ ಕೇರಳ ಪ್ರಾಂತ್ಯ ಕಾರ್ಯವಾಹಕ್ ಪಿ.ಎನ್ ಈಶ್ವರ್ ಹೇಳಿದ್ದಾರೆ.
ತೃಶೂರು ಪೂರಂನಲ್ಲಿ ಕಲುಷಿತಗೊಳಿಸಿರುವುದರ ಹಿಂದೆ ಆರ್ಎಸ್ಎಸ್ನ ಕೈವಾಡವಿದೆ ಎಂದು ವಿಧಾನಸಭೆ ಜವಾಬ್ದಾರಿ ಯುತ ಹೊಣೆಗಾರಿಕೆ ಹೊಂದಿರುವ ಸಚಿವರು ಮತ್ತು ಕೆಲವು ಶಾಸಕರು ವಿಧಾನಸಭೆಯ ಒಳಗೆ ಹಾಗೂ ಹೊರಗಡೆ ನಿರಂತರವಾಗಿ ದೂಷಿ ಸುತ್ತಿರುವುದು ಖಂಡನೀಯ ವಾಗಿದೆ. ಯಾವ ಪುರಾವೆಗಳ ಆಧಾರದಲ್ಲಿ ನಿರಾಧಾರಿತವಾದ ಇಂತಹ ತಪ್ಪು ಪ್ರಚಾರ ನಡೆಸಲಾಗುತ್ತಿದೆ ಎಂದು ಈಶ್ವರ್ ಪ್ರಶ್ನಿಸಿದ್ದಾರೆ. ಈ ವಿಷಯ ದಲ್ಲಿ ನಾವು ವಿಧಾನಸಭಾ ಅಧ್ಯಕ್ಷ ಮತ್ತು ರಾಜ್ಯಪಾಲರನ್ನು ಭೇಟಿಯಾ ಗುವು ದಾಗಿಯೂ ಅವರು ತಿಳಿಸಿದ್ದಾರೆ.
ರಾಜಕೀಯ ವಿವಾದಗಳಿಗೆ ಆರ್ಎಸ್ಎಸ್ನ್ನು ಎಳೆದು ಹಾಕುತ್ತಿರುವ ಯತ್ನ ನಿಜಕ್ಕೂ ದುರುದ್ದೇಶಪೂರಿತವಾದುದಾಗಿದೆ. ಪೂರಂನ್ನು ಕಲುಷಿತಗೊಳಿಸಿರುವ ವಿವಾದದ ವಿಷಯಗಳಲ್ಲೂ ಆರ್ಎಸ್ಎಸ್ನ್ನು ವಿನಾಕಾರಣ ಎಳೆದು ಹಾಕಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಸಚಿವರು ಮತ್ತು ವಿರೋಧ ಪಕ್ಷ ನಾಯಕರು ಪರಸ್ಪರ ಕಚ್ಚಾಡುತ್ತಿರುವುದಕ್ಕೆ ಆರ್ಎಸ್ಎಸ್ ಹೆಸರನ್ನು ವಿನಾ ಕಾರಣವಾಗಿ ಬಳಸಲಾಗುತ್ತಿದೆ. ಇದನ್ನು ಸುತಾರಾಂ ಅಂಗೀಕರಿಸು ವಂತಿಲ್ಲ.
ಇಂತಹ ವಿವಾದಗಳಲ್ಲಿ ಮೂಗು ತುರಿಸಲು ಆರ್ಎಸ್ಎಸ್ ಇಲ್ಲ. ಮಾತ್ರವಲ್ಲ ಆಸಕ್ತಿಯನ್ನೂ ಹೊಂದಿ ಲ್ಲವೆಂದು ಅವರು ಹೇಳಿದ್ದಾರೆ. ತೃಶೂರು ಪೂರಂ, ಶಬರಿಮಲೆ ತೀರ್ಥಾಟನೆ ಸೇರಿದಂತೆ ಕೇರಳದ ತನ್ನದೇ ಆದ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಎಲ್ಲಾ ಉತ್ಸವಗಳನ್ನೂ ಸಂಘರ್ಷ ಭರಿತಗೊಳಿಸಲು ಹಾಗೂ ವಿವಾದತ್ತ ಸಾಗಿಸುವ ಯೋಜನಾ ಬದ್ದವಾದ ಕೆಲಸದ ಒಂದು ಮುಂದರಿಕೆ ಯಾಗಿದೆ ಇದು ಎಂದೂ ಪಿ.ಎನ್. ಈಶ್ವರ್ ಹೇಳಿದ್ದಾರೆ.







