ವಿಧಾನಸಭೆಯ ಸಂಪೂರ್ಣ ಬಜೆಟ್ ಅಧಿವೇಶನ ಜೂನ್ 10ರಿಂದ
ತಿರುವನಂತಪುರ: ರಾಜ್ಯ ವಿಧಾನ ಸಭೆಯ ಸಂಪೂರ್ಣ ಬಜೆಟ್ ಅಧಿವೇ ಶನ ಜೂನ್ 10ರಂದು ಆರಂಭಗೊಂಡು ಜುಲೈ ೨೫ರ ತನಕ ಮುಂದುವರಿಯ ಲಿದೆ. ಈ ವಿಷಯವನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಜೂನ್ 10ರಿಂದ 12ರತನಕ ಮೊದಲ ಹಂತದ ಅಧಿವೇಶನ ನಡೆಯಲಿದೆ. ಜೂನ್ 13ರಿಂದ 15ರ ತನಕ ವಿಧಾನಸಭಾ ಸಮುಚ್ಚಯದ ಶಂಕರನಾರಾಯಣ ತಂಬಿ ಸಭಾಂಗಣದಲ್ಲಿ ವಿಶ್ವ ಕೇರಳ ಸಭೆ ನಡೆಯಲಿದೆ. ಅನಂತರ ಬಕ್ರೀದ್ ಹಬ್ಬವೂ ಕಳೆದ ಬಳಿಕ ಜೂನ್ 19ರಂದು ಅಧಿವೇಶನ ಪುನರಾರಂಭಗೊಳ್ಳಲಿದೆ.
ಅಧಿವೇಶನದಲ್ಲಿ ವಿತ್ತೀಯ ವಿಯದ ಚರ್ಚೆಗೆ ಮಾತ್ರವಾಗಿ 13 ದಿನಗಳನ್ನು ಮೀಸಲಿರಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳ ಪುನರ್ ನಿರ್ಣಯ ಹಾಗೂ ಹೆಚ್ಚುವರಿ ವಾರ್ಡ್‌ಗಳನ್ನು ಸೃಷ್ಟಿಸುವ ಕುರಿತಾದ ಮಸೂದೆಯನ್ನು ಈ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯೂ ಇದೆ. ಇದರ ಹೊರತಾಗಿ ಇತರ ಹಲವು ಮಸೂದೆಗಳನ್ನು ಅಂಗೀಕಾರಕ್ಕಾಗಿ ಸದನದಲ್ಲಿ ಮಂಡಿಸಲಾಗುವುದು.
ಸಿಪಿಎಂ ನೇತಾರ ಎಳಮರಂ ಕರೀಂ, ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೊ ವಿಶ್ವಂ ಮತ್ತು ಕೇರಳ ಕಾಂಗ್ರೆಸ್ (ಎಂ)ನ ಜೋಸ್ ಕೆ. ಮಾಣಿಯವರ ರಾಜ್ಯಸಭಾ ಸದಸ್ಯತನದ ಅವಧಿ ಜುಲೈ 1ಕ್ಕೆ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ತೆರವು ಬೀಳುವ ಈ ಮೂರು ಸ್ಥಾನಗಳಿಗಿರುವ ಚುನಾವಣೆ ಈ ವಿಧಾನಸಭಾ ಅಧಿವೇಶನದಲ್ಲೇ ನಡೆಯಲಿದೆ.