ವಿವಾಹ ಕಾರ್ಯಕ್ರಮದಲ್ಲಿ ಬಡಿಸಿದ ಆಹಾರದಿಂದ 150 ಮಂದಿಗೆ ಹಳದಿ ಕಾಮಾಲೆ

ಕೊಚ್ಚಿ: ಎರ್ನಾಕುಳಂ ಮೂವಾಟು ಪುಳದಲ್ಲಿ ಒಂದು ತಿಗಳ ಹಿಂದೆ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗ ವಹಿಸಿದ 150 ಮಂದಿಗೆ ಹಳದಿ ಕಾಮಾಲೆ ಖಚಿತಪಡಿಸಲಾಗಿದೆ. ವಿವಾಹಕ್ಕೆ ಮುಂಚಿತವಾಗಿ ನಡೆದ ಸಿಹಿ ಹಂಚುವ ಕಾರ್ಯಕ್ರಮದಲ್ಲಿ ಬಡಿಸಿದ ಆಹಾರದಿಂದ ರೋಗ ಹರಡಿರ ಬೇಕೆಂದು ಶಂಕಿಸಲಾಗಿದೆ. ಮೇ 5ರಂದು ಆವೋಲಿ ಪಂಚಾಯತ್ ನಡುಕ್ಕರದಲ್ಲಿ ವಿವಾಹ ನಡೆದಿತ್ತು. ಇದರ ಪೂರ್ವ ಭಾವಿಯಾಗಿ 3ರಂದು ಮನೆಯಲ್ಲಿ ಗೆಳೆ ಯರಿಗಾಗಿ ಸಿಹಿ ಹಂಚುವ ಕಾರ್ಯ ಕ್ರಮ ನಡೆಸಲಾಗಿದ್ದು, ಜನಪ್ರತಿನಿಧಿಗಳ ಸಹಿತ ಹಲವರು ಭಾಗವಹಿಸಿದ್ದು, ಇವರಿಗೆ ರೋಗ ಖಚಿತಪಡಿಸಲಾಗಿದೆ.

You cannot copy contents of this page