ವಿವಾಹ ಸಂಬಂಧ ಬೇರ್ಪಡಿಸಿದ ನ್ಯಾಯವಾದಿಯಿಂದ 7 ವರ್ಷದ ಪುತ್ರಿಗೆ ದೌರ್ಜನ್ಯ

ತೃಶೂರು: ಪೇರಮಂಗಳತ್ ಎಂಬಲ್ಲಿ ಪುತ್ರಿಯನ್ನು ದೌರ್ಜನ್ಯಗೈದ ದೂರಿನಂತೆ ನ್ಯಾಯವಾದಿ ಸೆರೆಯಾಗಿ ದ್ದಾನೆ. ಡಾಕ್ಟರಲ್ಲಿ ಮಗು ದೌರ್ಜನ್ಯದ ಬಗ್ಗೆ ತಿಳಿಸಿತ್ತು. 7 ವರ್ಷದ ಪುತ್ರಿಯನ್ನು ದೌರ್ಜನ್ಯಗೈದ ಪ್ರಕರಣದಲ್ಲಿ ನ್ಯಾಯ ವಾದಿಯನ್ನು ಸೆರೆ ಹಿಡಿಯಲಾಗಿದೆ. ತಂದೆ ತಾಯಿ ಎರಡು ವರ್ಷದ ಹಿಂದೆ ವಿವಾಹ ಸಂಬಂಧವನ್ನು ವಿಚ್ಛೇಧಿಸಿದ್ದರು. ನ್ಯಾಯಾಲಯದ ಆದೇಶ ದಂತೆ ಆದಿತ್ಯ ವಾರಗಳಂದು ತಂದೆಯ ಜೊತೆ ಮಗು ಇರಬೇಕೆಂದು ತೀರ್ಪು ನೀಡ ಲಾಗಿತ್ತು. ಈ ದಿನದಂದು ಮಗುವನ್ನು ದೌರ್ಜನ್ಯ ಗೈದಿರಬೇಕೆಂದು ಶಂಕಿಸಲಾ ಗಿದೆ.  ತೃಶೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತೆರಳಿದಾಗ ಡಾಕ್ಟರಲ್ಲಿ ತಂದೆ ತನ್ನನ್ನು ದೌರ್ಜನ್ಯಗೈದಿರು ವುದಾಗಿ ಬಾಲಕಿ ಹೇಳಿಕೆ ನೀಡಿದ್ದಾಳೆ. ಡಾಕ್ಟರ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ನಿನ್ನೆ ಬೆಳಿಗ್ಗೆ ಆರೋಪಿಯನ್ನು ಬಂಧಿಸಲಾಗಿದೆ.

You cannot copy contents of this page