ವಿವಿಧೆಡೆಗಳಲ್ಲಿ ಅಧ್ಯಾಪಕ ಹುದ್ದೆ ಭರ್ತಿಗೆ ಸಂದರ್ಶನ

ದೇಲಂಪಾಡಿ: ಇಲ್ಲಿನ ಜಿವಿಎಚ್ಎಸ್ಎಸ್ನಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ಭರ್ತಿಗೊಳಿಸಲು ಈ ತಿಂಗಳ 29ರಂದು ಬೆಳಿಗ್ಗೆ 11 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಜ್ಯೂನಿಯರ್ ಅರೆಬಿಕ್-1, ಎಚ್ಎಸ್ಟಿ ಸಮಾಜ ವಿಜ್ಞಾನ ಕನ್ನಡ-1, ಮಲೆಯಾಳ-1, ಹಿಂದಿ-1, ಯುಪಿಎಸ್ಟಿ ಮಲೆಯಾಳ-1 ಎಂಬೀ ಹುದ್ದೆಗಳು ಖಾಲಿ ಇದ್ದು, ಅರ್ಹರು ಸಂದರ್ಶನದಲ್ಲಿ ಭಾಗವಹಿಸಬಹುದೆಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ಕಾಸರಗೋಡು: ಇಲ್ಲಿನ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಚ್ಎಸ್ಟಿ ಗಣಿತ (ಕನ್ನಡ), ಸೋಷಲ್ (ಕನ್ನಡ), ಕನ್ನಡ (ಪಾರ್ಟ್ಟೈಮ್), ಇಂಗ್ಲಿಷ್ ಹುದ್ದೆ ಭರ್ತಿಗೆ ಈ ತಿಂಗಳ 29 ರಂದು ಬೆಳಿಗ್ಗೆ 11 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಕಾಸರಗೋಡು: ಇಲ್ಲಿನ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಚ್ಎಸ್ಎಸ್ ವಿಭಾಗದಲ್ಲಿ ಖಾಲಿ ಇರುವ ಇಂಗ್ಲಿಷ್, ಸ್ಟ್ಯಾಟಿಸ್ಟಿಕ್ಸ್, ಹಿಸ್ಟರಿ, ಪೊಲಿಟಿಕಲ್ ಸಯನ್ಸ್, ಸೋಷ್ಯೋಲಜಿ, ಇಕಾನಾಮಿಕ್ಸ್, ಕಾಮರ್ಸ್ ಅಧ್ಯಾಪಕ ಹುದ್ದೆಗಳನ್ನು ಭರ್ತಿಗೊಳಿಸಲು ಈ ತಿಂಗಳ 30ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಕಾಟುಕುಕ್ಕೆ: ಇಲ್ಲಿನ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಖಾಲಿ ಇರುವ ಎಚ್ಎಸ್ಎಸ್ಟಿ ಕನ್ನಡ, ಜ್ಯೂನಿಯರ್ ಸಂಸ್ಕೃತ ಎಂಬೀ ಹುದ್ದೆಗಳನ್ನು ಭರ್ತಿಗೊಳಿಸಲು ಈ ತಿಂಗಳ 30ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಬಂದಡ್ಕ: ಮಾಣಿಮೂಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಿರುವ ಎಲ್ಪಿಎಸ್ಟಿ ಕನ್ನಡ-2, ಮಲೆಯಾಳ-1 ಹುದ್ದೆ ಭರ್ತಿಗೆ ಈ ತಿಂಗಳ 30ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಉಪ್ಪಳ: ಇಲ್ಲಿನ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಖಾಲಿ ಇರುವ ಎಚ್ಎಸ್ಎಸ್ಟಿ ಹಿಸ್ಟರಿ, ಇಕನಾಮಿಕ್ಸ್, ಕಾಮರ್ಸ್, ಸ್ಟಾಟಿಸ್ಟಿಕ್ಸ್, ಪೊಲಿಟಿಕಲ್ ಸಯನ್ಸ್, ಇಂಗ್ಲಿಷ್, ಎಚ್ಎಸ್ಎಸ್ಟಿ ಜ್ಯೂನಿಯರ್ ಅರೆಬಿಕ್, ಹಿಂದಿ, ಕಾಮರ್ಸ್, ಇಂಗ್ಲಿಷ್ ಹುದ್ದೆ ಭರ್ತಿಗೆ ಸಂದರ್ಶನ ಈ ತಿಂಗಳ 29ರಂದು ಬೆಳಿಗ್ಗೆ 9.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯಲಿದೆ.
ಮೊಗ್ರಾಲ್ ಪುತ್ತೂರು: ಇಲ್ಲಿನ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಚ್ಎಸ್ಟಿ ಹಿಂದಿ-1, ಇಂಗ್ಲಿಷ್-1, ಮಲೆಯಾಳ-1, ಸೋಷ್ಯಲ್ ಸಯನ್ಸ್-1, ಫಿಸಿಕಲ್ ಸಯನ್ಸ್ ಕನ್ನಡ-1, ಡ್ರಾಯಿಂಗ್ ಟೀಚರ್-1, ಯುಪಿಎಸ್ಟಿ ಮಲೆಯಾಳ, ಯುಪಿಎಸ್ಟಿ ಹಿಂದಿ-1, ಅರೆಬಿಕ್-1 ಹುದ್ದೆ ಭರ್ತಿಗೆ ನಾಳೆ ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಬದಿಯಡ್ಕ: ಪೆರಡಾಲ ಸರಕಾರಿ ಹೈಸ್ಕೂಲ್ನಲ್ಲಿ ಹೈಸ್ಕೂಲ್ ವಿಭಾಗ ಮಲೆಯಾಳ-2, ಇಂಗ್ಲಿಷ್, ಹಿಂದಿ, ಫಿಸಿಕಲ್ ಸಯನ್ಸ್, ನ್ಯಾಚುರಲ್ ಸಯನ್ಸ್, ಸೋಷ್ಯಲ್ ಸಯನ್ಸ್, ಗಣಿತ, ಯುಪಿಎಸ್ಟಿ ಮಲೆಯಾಳ, ಜ್ಯೂನಿಯರ್ ಲ್ಯಾಂಗ್ವೇಜ್ ಹಿಂದಿ-2, ಅರೆಬಿಕ್ ಎಂಬೀ ಹುದ್ದೆಗಳಿಗೆ ಅಧ್ಯಾಪಕರನ್ನು ನೇಮಕಗೊಳಿಸಲು ನಾಳೆ ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಮಂಜೇಶ್ವರ: ಬಂಗ್ರಮAಜೇಶ್ವರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಖಾಲಿ ಇರುವ ಎಚ್ಎಸ್ಟಿ ಸಮಾಜವಿಜ್ಞಾನ ಮಲೆಯಾಳ-1, ಫಿಸಿಕಲ್ ಸಯನ್ಸ್ ಮಲೆಯಾಳ-1, ಯುಪಿಎಸ್ಟಿ ಕನ್ನಡ-2, ಎಲ್ಪಿಎಸ್ಟಿ ಮಲೆಯಾಳ-2, ಯುಪಿ ಅರೆಬಿಕ್-1, ಜ್ಯೂನಿಯರ್ ಹಿಂದಿ ಟೀಚರ್-1 ಎಂಬೀ ಹುದ್ದೆಗಳ ಭರ್ತಿಗೆ ಈ ತಿಂಗಳ 29ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಮಂಗಲ್ಪಾಡಿ: ಇಲ್ಲಿನ ಜಿಎಚ್ಡಬ್ಲ್ಯು ಎಲ್ಪಿ ಶಾಲೆಯಲ್ಲಿ ಎಲ್ಪಿಎಸ್ಟಿ ಕನ್ನಡ-1, ಮಲೆಯಾಳ-1, ಎಫ್ಟಿ ಅರೆಬಿಕ್-1 ಹುದ್ದೆ ಖಾಲಿ ಇದ್ದು ಈ ತಿಂಗಳ 29ರಂದು ಬೆಳಿಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ.
ಪೆರ್ಲ: ಪಡ್ರೆ ವಾಣಿನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಖಾಲಿ ಇರುವ ಹೈಸ್ಕೂಲ್ ವಿಭಾಗ ಎಚ್ಎಸ್ಟಿ ಹಿಂದಿ, ಗಣಿತ (ಕನ್ನಡ ಮಾಧ್ಯಮ) ಹುದ್ದೆ ಭರ್ತಿಗೆ ಈ ತಿಂಗಳ 30ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಕಜಂಪಾಡಿ: ಇಲ್ಲಿನ ಸರಕಾರಿ ಅಭ್ಯುದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಎಲ್ಪಿಎಸ್ಟಿ ಕನ್ನಡ ಶಿಕ್ಷಕ ಹುದ್ದೆ ಭರ್ತಿಗೊಳಿಸಲು ಈ ತಿಂಗಳ 29ರಂದು ಅಪರಾಹ್ನ 2.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಕುಂಬಳೆ: ಉಜಾರ್ ಉಳುವಾರು ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಎಲ್ಪಿ ಎಸ್ಟಿ ಕನ್ನಡ-1, ಮಲಯಾಳ-1 ಹುದ್ದೆ ಭರ್ತಿಗೆ ಈ ತಿಂಗಳ 31ರಂದು ಬೆಳಿಗ್ಗೆ 10ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಕಾಸರಗೋಡು: ನೆಲ್ಲಿಕುಂಜೆ ಜಿಡಬ್ಲ್ಯುಎಲ್ಪಿ ಶಾಲೆಯಲ್ಲಿ ಖಾಲಿ ಇರುವ ಎಲ್ಪಿ ವಿಭಾಗ ಕನ್ನಡ ಅಧ್ಯಾಪಕ ಹುದ್ದೆ ಭರ್ತಿಗೊಳಿಸಲು ನಾಳೆ ಬೆಳಿಗ್ಗೆ 11 ಗಂಟೆಗೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಈ ಹುದ್ದೆಗಳಿಗೆ ಅರ್ಹರಾದವರು ಅಸಲಿ ಪ್ರಮಾಣಪತ್ರಗಳ ಸಹಿತ ಆಯಾ ಶಾಲಾ ಕಚೇರಿಗಳಲ್ಲಿ ಹಾಜರಾಗಬೇಕೆಂದು ಸಂಬAಧಪಟ್ಟ ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page