ಮಂಜೇಶ್ವರ: ಮಂಜೇಶ್ವರ ಪೊಲೀಸರು ಗಸ್ತು ನಡೆಸುತ್ತಿರುವ ವೇಳೆ ಮಾರಾಟಕ್ಕಾಗಿ ಕೈವಶವಿರಿಸಿದ ಹೊಗೆಸೊಪ್ಪುಉತ್ಪನ್ನ ಸಹಿತ ಮೂರು ಮಂದಿಯನ್ನು ವಿವಿಧೆಡೆಯಿಂದ ಸೆರೆಹಿಡಿದಿದ್ದಾರೆ. ಶನಿವಾರ ಸಂಜೆ 6 ಗಂಟೆಗೆ ಮಜೀರ್ ಪಳ್ಳ ಬಸ್‌ನಿಲ್ದಾಣ ಪರಿಸರದಿಂದ 48 ಪ್ಯಾಕೆಟ್ ಸಹಿತ ಕೊಡ್ಲಮೊಗರು ಅಸನ ಬೈಲ್ ನಿವಾಸಿ ಅಹಮ್ಮದ್ ನಜೀಬ್ (22), ಸಂಜೆ 7ಗಂಟೆಗೆ ಆನೆಕಲ್ಲು ಬಸ್ ನಿಲ್ದಾಣ ಪರಿಸರದಿಂದ 28 ಪ್ಯಾಕೆಟ್ ಸಹಿತ ರಾಜಸ್ಥಾನ ನಿವಾಸಿ ಮಂಗಳೂರಿನಲ್ಲಿ ವಾಸವಾಗಿರುವ ಜಿತೇಂದ್ರ ಸಿಂಗ್ (28), ರಾತ್ರಿ 9ಗಂಟೆಗೆ ವರ್ಕಾಡಿ ಸುಂಕದಕಟ್ಟೆ ಬಸ್ ನಿಲ್ದಾಣ ಬಳಿಯಿಂದ 35 ಪ್ಯಾಕೇಟ್ ಪಾನ್‌ಮಸಾಲ ಸಹಿತ ಕರ್ನಾಟಕದ ಕಣಿಯೂರು ಬೇಂಗದ ಪಡಪುö್ಪ ನಿವಾಸಿ ಅಬ್ದುಲ್ ರಹಿಮಾನ್ (48) ಎಂಬವರನ್ನು ಎಸ್.ಐ ರತೀಶ್.ಕೆ.ಜಿ ನೇತೄತ್ವದ ತಂಡ ಸೆರೆ ಹಿಡಿದಿದೆ. ಇವರಿಂದ ಮಾಲು ವಶಪಡಿಸಿ ಕೇಸು ದಾಖಲಿಸಿದ್ದಾರೆ.
