ವಿವಿಧೆಡೆ ಮತ್ತೆ ಅಗ್ನಿ ದುರಂತ : ಅಗ್ನಿಶಾಮಕ ದಳಕ್ಕೆ ಬಿಡುವಿಲ್ಲದ ಕೆಲಸ
ಉಪ್ಪಳ: ಅಗ್ನಿ ಅನಾಹುತ ವ್ಯಾಪಕಗೊಳ್ಳುತ್ತಿದ್ದು, ಅಗ್ನಿಶಾಮಕ ದಳಕ್ಕೆ ಬಿಡುವಿಲ್ಲದ ದಿನಗಳಾಗಿದೆ. ನಿನ್ನೆ ಬೆಳಿಗ್ಗೆ ಯಿಂದ ಸಂಜೆ ತನಕ ವಿವಿಧ ಪ್ರದೇಶ ಗಳ ನಾಲ್ಕು ಕಡೆಗಳಲ್ಲಿ ಅಗ್ನಿಅನಾಹುತ ಸಂಭವಿದ್ದು, ಉಪ್ಪಳ ಅಗ್ನಿ ಶಾಮಕ ದಳದ ಸ್ಟೇಶನ್ ಆಫೀಸರ್ ರಾಜೇಶ್ ನೇತೃತ್ವದಲ್ಲಿ ತೆರಳಿ ಬೆಂಕಿಯನ್ನು ನಂದಿಸಿ ಸಂಭವಿ ಸಬಹುದಾದ ಅಪಾಯವನ್ನು ತಪ್ಪಿಸಿ ದ್ದಾರೆ. ಕುಬಣೂರಿನಲ್ಲಿ ಉರಿದ ತ್ಯಾಜ್ಯ ದಿಂದ ಮತ್ತೆ ಹೊಗೆ ಬರಲಾರಂ ಭಿಸಿದ್ದು ಅಲ್ಲಿಗೆ ಅಗ್ನಿ ಶಾಮಕದಳ ತೆರಳಿ ನೀರು ಹಾಯಿಸಿದೆ. ಆರಿಕ್ಕಾಡಿ ಕಳತ್ತೂರು, ಪೈವಳಿಕೆ ಬೋಳಂಗಳ ಮತ್ತು ಕಡಂಬಾರು ಬಳಿಯ ಮೊರತ್ತಣೆ ಪರಿಸರದಲ್ಲಿ ವ್ಯಕ್ತಿಗಳ ಕಾಡು, ಹುಲ್ಲು ತುಂಬಿದ ಹಿತ್ತಿಲಲ್ಲಿ ಬೆಂಕಿ ಹೊತ್ತಿ ಉರಿದಿದೆ. ದಾರಿ ಹೋಕರು ಬೀಡಿ ಅಥವಾ ಸಿಗರೇಟ್ ಸೇದಿ ಬಿಸಾಡುತ್ತಿ ರುವುದೇ ಬೆಂಕಿಗೆ ಕಾರಣವೆನ್ನಲಾಗಿದೆ.