ವಿವಿಧ ಬೇಡಿಕೆ ಆಗ್ರಹಿಸಿ ಸಂಯುಕ್ತ ಮುಷ್ಕರ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ
ಕಾಸರಗೋಡು: ಕೊಚ್ಚಿ ತಿರುವನಂತಪುರ ಕಾರ್ಪರೇಷನ್‌ಗಳ ಕುಡಿಯುವ ನೀರು ವಿತರಣೆಯನ್ನು ಎಡಿಬಿಗೆ ಪೂರ್ಣವಾಗಿ ನೀಡಲಿರುವ ಮೆನೇಜ್‌ಮೆಂಟ್‌ನ ಯತ್ನವನ್ನು ಕೊನೆಗೊಳಿಸಬೇಕೆಂದು ಆಗ್ರಹಿಸಿ ಕೇರಳ ವಾಟರ್ ಅಥೋರಿಟಿ ಎಂಪ್ಲೋಯಿಸ್ (ಸಿಐಟಿಯು), ಆಲ್ ಕೇರಳ ವಾಟರ್ ಅಥೋರಿಟಿ ಎಂಪ್ಲೋಯಿಸ್ ಯೂನಿ ಯನ್ (ಎಐಟಿಯುಸಿ), ಅಸೋಸಿ ಯೇಷನ್ ಆಫ್ ಕೇರಳ ವಾಟರ್ ಅಥೋರಿಟಿ ಆಫೀಸಸ್ ಎಂಬೀ ಸಂಘಟನೆಗಳ ಜಂಟಿ ಆಶ್ರಯದಲ್ಲಿ ರಾಜ್ಯವ್ಯಾಪಕವಾಗಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಕಾಸರಗೋಡು ವಿದ್ಯಾನಗರ ಪಿಎಚ್ ಡಿವಿಷನ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಕೇರಳ ವಾಟರ್ ಅಥೋರಿಟಿ ಎಂಪ್ಲೋ ಯೀಸ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಎ. ಸುಧಾಕರನ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ. ವಿನೋದ್ ಸ್ವಾಗತಿಸಿದರು. ಆಲ್ ಕೇರಳ ವಾಟರ್ ಅಥೋರಿಟಿ ಎಂಪ್ಲೋಯೀಸ್ ಯೂನಿಯನ್‌ನ ಕೆ.ವಿ. ಸಂತೋಷ್ ಅಧ್ಯಕ್ಷತೆ ವಹಿಸಿದರು. ಕೆ.ಜಿ. ಮನೋಜ್ ಕುಮಾರ್, ಸಿ. ರಾಘವನ್, ಎ. ಸತೀಶ್ ಕುಮಾರ್ ಮಾತನಾಡಿದರು.