ವಿವಿಧ ರೀತಿಯ ಸಾಂಕ್ರಾಮಿಕ ರೋಗ: ಈ ವರ್ಷ ಐನೂರಕ್ಕಿಂತಲೂ ಹೆಚ್ಚು ಮಂದಿ ಸಾವು

ಕಾಸರಗೋಡು: ರಾಜ್ಯದಲ್ಲಿ ವಿವಿಧ ರೀತಿಯ ನಾಲ್ಕು ಸಾಂಕ್ರಾಮಿಕ ರೋಗಗಳು ಈ ತನಕ 500ಕ್ಕಿಂತಲೂ ಹೆಚ್ಚು ಮಂದಿಯ ಪ್ರಾಣ ಅಪಹರಿಸಿದೆ.

ಇಲಿ ಜ್ವರ, ಡೆಂಗ್ಯೂ ಜ್ವರ, ಚಿಕ್ಕನ್ ಪೋಕ್ಸ್ ಮತ್ತು ಎಚ್1 ಎನ್1 ಜ್ವರ ರಾಜ್ಯದಲ್ಲಿ ಇತ್ತೀಚೆಗಿ ನಿಂದ ವ್ಯಾಪಕವಾಗಿ ಹರಡತೊ ಡಗಿದೆ. ಇದರಲ್ಲಿ ಇಲಿಜ್ವರದಿಂದ ಮಾತ್ರವಾಗಿ ರಾಜ್ಯದಲ್ಲಿ ಈ ವರ್ಷ 273 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸೆಪ್ಟಂಬರ್‌ನಲ್ಲಿ ಮಾತ್ರವಾಗಿ 40 ಮಂದಿಯ ಪ್ರಾಣ ಇಲಿಜ್ವರ  ಅಪಹರಿಸಿದೆ.  ಇಲಿಜ್ವರದ ಲಕ್ಷಣ ಕಂಡುಬರುವಾಗಲೇ ಅದು ಮಾರಕವಾಗಿರುತ್ತದೆ ಎಂದು ಆರೋಗ್ಯ ಇಲಾಖೆಯ ತಜ್ಞರು ಹೇಳುತ್ತಿದ್ದಾರೆ. ರೋಗಪ್ರತಿರೋಧಕ ಔಷಧಿ ಸೇವಿಸದೆ ಮಲಿನಜಲದಲ್ಲಿ ನಿಂತು ಕೆಲಸ ಮಾಡು ವುದು ಅಥವಾ ಉಪಯೋಗಿಸು ವುದು ಇಲಿಜ್ವರ ಹೆಚ್ಚಾಗಿ ತಗಲಲು ಕಾರಣವಾ ಗುತ್ತದೆ. ಇಲಿಜ್ವರ ಮನುಷ್ಯ ರಿಗೆ ಮಾತ್ರ ವಲ್ಲ ಜಾನುವಾರುಗಳಿಗೂ  ತಗಲುತ್ತದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ತೊಡಗುವವರು ಮತ್ತು ವಲಸೆ ಕಾರ್ಮಿಕರಲ್ಲಿ ಇಲಿ ಜ್ವರ ಅತೀ ಹೆಚ್ಚು ಕಾಣಿಸುತ್ತದೆ ಎಂದು ಆರೋಗ್ಯ ಇಲಾ ಖೆಯ ಅಧಿಕಾರಿಗಳು ಹೇಳುತ್ತಾರೆ.

You cannot copy contents of this page