ವಿವೇಕಾನಂದ ಸ್ಮಾರಕದಲ್ಲಿ ಮೋದಿ ಧ್ಯಾನ ಆರಂಭ

ಕನ್ಯಾಕುಮಾರಿ: ಇಲ್ಲಿನ ವಿವೇಕಾ ನಂದ ಸ್ಮಾರಕದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಧ್ಯಾನ ನಿರತರಾದರು. ನಿನ್ನೆ ಸಂಜೆ 7.30ಕ್ಕೆ ನರೇಂದ್ರಮೋದಿ  ಕನ್ಯಾಕುಮಾರಿ ವಿವೇಕಾನಂದ ಬಂಡೆಯಲ್ಲಿ ಧ್ಯಾನ ಆರಂಭಿಸಿದ್ದಾರೆ. ಕಾವಿ ವಸ್ತ್ರ ಉಟ್ಟು ಸ್ವಾಮಿ ವಿವೇಕಾ ನಂದ ಧ್ಯಾನಕ್ಕೆ ಕುಳಿತ ಅದೇ ಸ್ಥಳದಲ್ಲಿ ಮೋದಿ ಕೂಡಾ ಧ್ಯಾನ ನಿರತರಾಗಿ ದ್ದಾರೆ. ರಾತ್ರಿ ಬಿಸಿನೀರು ಮಾತ್ರ ಸೇವಿಸಿದ್ದು,  ಬೆಳಗ್ಗಿನವರೆಗೆ ಕುಳಿತು ಧ್ಯಾನಾಸಕ್ತರಾದರು. ಇಂದು ಮುಂಜಾನೆ ಸೂರ್ಯೋದಯ ವೀಕ್ಷಿಸಿದ ಬಳಿಕ ಪ್ರಾರ್ಥನೆ ಆರಂಭಿಸಿ ದರು.  ನಾಳೆ ಮಧ್ಯಾಹ್ನ ಧ್ಯಾನ ಕೊನೆ ಗೊಳಿಸಿ ಅವರು ತಿರುವನಂತಪುರಕ್ಕೆ ಹಿಂತಿರುಗುವರು.  ಕ್ಷೇತ್ರದಲ್ಲಿ ಮೋದಿ ಧ್ಯಾನ ನಿರತರಾಗಿರುವ ಭಾವಚಿತ್ರಗಳು, ವೀಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ. 2000ಕ್ಕೂ ಅಧಿಕ ಪೊಲೀಸರು ಪ್ರಧಾನಮಂತ್ರಿಗೆ ಭದ್ರತೆ ಏರ್ಪಡಿಸಿದ್ದಾರೆ. ರಜಾ ಸಮಯವಾದ ಕಾರಣ ಕನ್ಯಾಕುಮಾರಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೂ ಈ ಪ್ರದೇಶಕ್ಕೆ ಯಾರನ್ನೂ ಪ್ರವೇಶಿಸಲು ಬಿಡುವುದಿಲ್ಲ.

You cannot copy contents of this page