ವಿಶ್ವಹಿಂದೂ ಪರಿಷತ್ ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆ ಮಂಜೇಶ್ವರದಿಂದ ಆರಂಭ
ಉಪ್ಪಳ: ವಿಶ್ವಹಿಂದೂ ಪರಿಷತ್ ಸ್ಥಾಪನೆಗೊಂಡು ೬೦ನೇ ವರ್ಷ ಪೂರ್ತಿಯÁದ ಅಂಗವಾಗಿ ಬಜರಂಗದಳ,ಮಾತೃಶಕ್ತಿ ಮತ್ತು ದುರ್ಗಾವಾಹಿನಿ ನೇತೃತ್ವದಲ್ಲಿ ಶೌರ್ಯ ಜಾಗರಣ ರಥಯಾತ್ರೆ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನ ಪರಿಸರದಿಂದ ತಿರುವನಂತಪುರಕ್ಕೆ ನಿನ್ನೆ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಧಾರ್ಮಿಕ ಮುಂದಾಳು ರವೀಶ್ ತಂತ್ರಿ ಕುಂಟಾರು ದೀಪ ಪ್ರಜ್ವಲನೆಗೊಳಿಸಿದರು. ವೇದಮೂರ್ತಿ ಚಕ್ರಪಾಣಿ ದೇವಪೂಜಿತ್ತಾಯ ಆರಿಕ್ಕಾಡಿ ಅಧ್ಯಕ್ಷತೆ ವಹಿಸಿದರು. ಬಜರಂಗದಳ ರಾಷ್ಟಿçÃಯ ಸಹ ಸಂಯೋಜಕ್ ಸೂರ್ಯ ನಾರಯಣ.ಜಿ ದಿಕ್ಸೂಜಿ ಭಾಷಣ ಮಾಡಿದರು. ವಿಶ್ವಹಿಂದೂ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ವಿಶ್ವಹಿಂದೂ ಪರಿಷತ್ ಕೇರಳ ಪ್ರಾಂತ ಅಧ್ಯಕ್ಷ ವಿಜುತಂಬಿ, ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರದ ಅಧ್ಯಕ್ಷ ಗಣಪತಿ ಪೈ, ಬಜರಂಗ ದಳ ಕ್ಷೇತ್ರೀಯ ಸಂಯೋಜಕ್ ಜಿಜೇಶ್ ಪತ್ತೇರಿ, ಬಜರಂಗದಳ ಸಂಯೋಜಕ್ ಅನೂಪ್, ವಿಶ್ವಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷಅನಿಲ್ ವಲಯರ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಾಕ್ಷ ಜಯದೇವ್ ಖಂಡಿಗೆ, ಜಿಲ್ಲಾ ಕಾರ್ಯಾ ಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಬಜರಂಗ ದಳ ಜಿಲ್ಲಾ ಸಹ ಸಂಚಾಲಕ ಪ್ರದೀಪ್ ಪೆರಿಯಾರ್. ವಿಶ್ವಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಕೀರ್ತೇಶ್ವರ ಸ್ವಾಗತಿಸಿ, ಮಾತೃಶಕ್ತಿ ಕಣ್ಣೂರು ವಿಭಾಗ ಪ್ರಮುಖ್ ಮೀರಾ ಆಳ್ವ ಮತ್ತು ಅನಿಲ್ ಮಣಿಯಂಪಾರೆ ನಿರೂಪಿಸಿ ದರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಾಕ್ಷ ಶಂಕರ ಭಟ್ ಉಳುವಾನ ವಂದಿಸಿದರು. ವಿಶ್ವ ಹಿಂದೂ ಪರಿಷತ್ ಕೇರಳ ಪ್ರಾಂತ ವಿಭಾಗ, ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತರು ಉಪಸ್ಥಿತರಿದ್ದರು. ಕಾರ್ಯ ಕ್ರಮದ ಮೊದಲು ವಿವಿಧ ಭಜನಾ ತಂಡಗಳಿAದ ಕುಣಿತ ಭಜನೆ ನಡೆಯಿತು.