ವಿಷ ಸೇವಿಸಿದ ಯುವತಿ ಆಸ್ಪತ್ರೆಯಲ್ಲಿ ಮೃತ್ಯು
ಮುಳ್ಳೇರಿಯ: ಇಲಿ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟಳು. ಬೆಳ್ಳೂರು ಬಳಿಯ ಕುಂಜತ್ತೋಡಿ ನಿವಾಸಿ ಕೃಷ್ಣ ಎಂಬವರ ಮಗಳು ಪಿ.ಕೆ. ಜಯಶ್ರೀ (20) ಮೃತಯುವತಿ. ಈಕೆ ಮಂಗಳೂರಿನ ಮೀನುಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಡಿಸೆಂಬರ್ 29ರಂದು ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದರಿಂದ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಈಕೆ ಮೃತಪಟ್ಟಳು. ಘಟನೆ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತಳು ತಂದೆ, ತಾಯಿ ಹೊರತು ಸಹೋದರ ಸುನಿಲ್, ಸಹೋದರಿ ಸುಮ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾಳೆ.