ಮೀಂಜ: ನಿಧಾನರಾದ ಕೇರಳದ ಮಾಜಿ ಮುಖ್ಯ ಮಂತ್ರಿ, ಸಿಪಿಎಂ ಹಿರಿಯ ನೇತಾರ ವಿ ಎಸ್ ಅಚ್ಯುತಾನಂದನ್‌ರ ನಿಧನಕ್ಕೆ ಸಿಪಿಎಂ ಮೀಂಜ ಫಸ್ಟ್ ಮತ್ತು ಸೆಕೆಂಡ್ ಲೋಕಲ್ ಸಮಿತಿಗಳ ನೇತೃತ್ವದಲ್ಲಿ ಮೀಯಪದವಿನಲ್ಲಿ ಸರ್ವಪಕ್ಷ ಸಂತಾಪ ಸಭೆ ನಡೆಯಿತು. ಸಿಪಿಎಂ ಹಿರಿಯ ನೇತಾರ ಬಿ ಸದಾಶಿವ ರೈ ಅಧ್ಯಕ್ಷತೆ ವಹಿಸಿದರು. ಸಿಪಿಎಂ ನೇತಾರ ಕೆ ಆರ್ ಜಯಾನಂದ, ಸಿಪಿಐ ನೇತಾರ ರಾಮಕೃಷ್ಣ ಕಡಂಬಾರ್, ಬಿಜೆಪಿ ನೇತಾರ, ಬ್ಲಾಕ್ ಪಂಚಾಯತ್ ಸದಸ್ಯ ಕೆ ವಿ ರಾಧಾಕೃಷ್ಣ, ಕಾಂಗ್ರೆಸ್ ನೇತಾರ ದಾಮೋದರ, ಮಾಣಿ ಕಾಂಗ್ರೆಸ್ ನೇತಾರ ರಾಘವ ಚೇರಾಲ್, ಎಸ್ ಡಿ ಪಿ ಐ ನೇತಾರ ನೌಫಲ್ ಚಿಗುರುಪಾದೆ, ಹರೀಶ್ ಶೆಟ್ಟಿ ಕಡಂಬಾರ್, ಡಿ ಕಮಲಾಕ್ಷ, ಕರುಣಾಕರ ಶೆಟ್ಟಿ ಮಂಜೇಶ್ವರ, ಬಾಳಪ್ಪ ಬಂಗೇರ, ಪಂಚಾಯತ್ ಸದಸ್ಯರಾದ ಜನಾರ್ದನ ಪೂಜಾರಿ, ಸರಸ್ವತಿ ಎಲಿಯಾಣ ಮಾತನಾಡಿದರು. ರಾಮಚಂದ್ರ ಟಿ ಸ್ವಾಗತಿಸಿ, ಲೋಕೇಶ್ ಚಿನಾಲ ವಂದಿಸಿದರು. ಸಭೆಯ ನಂತರ ಮೀಯಪದವಿನಲ್ಲಿ ಮೌನ ಮೆರವಣಿಗೆ ನಡೆಯಿತು.
