ವಿ.ಎಸ್. ವಿರುದ್ಧ ಅವಹೇಳನ ಸಂದೇಶ: ಇಬ್ಬರ ವಿರುದ್ಧ ಕೇಸು
ಕಾಸರಗೋಡು: ನಿಧನ ಹೊಂದಿದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್‌ರ ವಿರುದ್ಧ ವಾಟ್ಸಪ್ ನಲ್ಲಿ ಸ್ಟೇಟಸ್, ಸಂದೇಶ ಹಾಕಿದ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಪಳ್ಳಿಕೆರೆ ತೊಟ್ಟಿ ನಿವಾಸಿ ಪೈಸಕ್ ವಿರುದ್ಧ ಬೇಕಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ವಿ.ಎಸ್. ಅಚ್ಯುತಾನಂದನ್‌ರ ಫೊಟೋದ ಕೆಳಗೆ ಕೋಮುವಾದಿ ಎಂಬ ಅಡಿಬರಹದೊಂ ದಿಗೆ ಸ್ಟೇಟಸ್ ಹಾಕಲಾಗಿತ್ತು. ಇದರಿಂದ ಗಲಾಟೆ ಎಬ್ಬಿಸಲು ಆರೋಪಿ ಯತ್ನಿಸಿ ದ್ದಾನೆಂದು ಕೇಸು ದಾಖಲಿಸಲಾಗಿದೆ. ವಿದೇಶ ನಂಬ್ರದಲ್ಲಿರುವ ವಾಟ್ಸಪ್‌ನಲ್ಲಿ ಈತ ಸ್ಟೇಟಸ್ ಹಾಕಿದ್ದನು. ಸ್ಪೆಷಲ್ ಬ್ರಾಂಚ್‌ನ ವರದಿ ಹಿನ್ನೆಲೆಯಲ್ಲಿ ಬೇಕಲ ಇನ್ಸ್‌ಪೆಕ್ಟರ್ ಎಂ.ವಿ. ಶ್ರೀದಾಸ್ ಕೇಸು ದಾಖಲಿಸಿದ್ದಾರೆ.
ಇದರ ಹೊರತಾಗಿ ಅಚ್ಯು ತಾನಂದನ್‌ರನ್ನು ಅವಹೇಳನಗೈಯ್ಯುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೊಟೋ ಪೋಸ್ಟ್ ಮಾಡಿದ ದೂರಿನಂತೆ ಕೊಪಾಡಿ ಗ್ರಾಮದ ಅಬ್ದುಲ್ಲ ಎಂಬಾತನ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.