ವಿ.ವಿ. ಕಂಪ್ಯೂಟರ್ ಅಸಿಸ್ಟೆಂಟ್ ಹುದ್ದೆಗೆ ಮಲೆಯಾಳ ಟೈಪ್‌ರೈಟಿಂಗ್ ಕಡ್ಡಾಯದಲ್ಲಿ ರಿಯಾಯಿತಿ: ಕನ್ನಡಿಗರಿಗೆ ಉಪಯುಕ್ತ

ಕಾಸರಗೋಡು: ಕೇರಳದ ವಿ.ವಿ.ಗಳಲ್ಲಿ ಖಾಲಿಯಿರುವ ಕಂಪ್ಯೂಟರ್ ಅಸಿಸ್ಟೆಂಟ್ ಹುದ್ದೆಗೆ ಟೈಪ್‌ರೈಟಿಂಗ್ ಮಲೆಯಾಳ ಲೋವರ್ ಕಡ್ಡಾಯವಾಗಿರಬೇಕೆಂಬ ಸರಕಾರದ ಆದೇಶದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ಇದು ಕಾಸರಗೋಡಿನ ಕನ್ನಡ ಉದ್ಯೋಗಾರ್ಥಿಗಳಿಗೆ ಸಹಾಯಕ ವಾಗಲಿದೆ. ಈ ಮೊದಲು ಕಾಸರಗೋಡಿನ ಕನ್ನಡಿಗರಿಗೆ ಪಿಎಸ್‌ಸಿ ಮೂಲಕ ಅರ್ಜಿ ಸಲ್ಲಿಸಲು ಟೈಪ್‌ರೈಟಿಂಗ್ ಮಲೆಯಾಳ ತಿಳಿದಿರಬೇಕೆಂಬ ಆದೇಶದಿಂದ ಸಮಸ್ಯೆ ಯಾಗುತ್ತಿತ್ತು. ಅದನ್ನು ಪರಿಹರಿಸಲು ಕಾಸರಗೋಡಿನಲ್ಲಿರುವ ಶಿಕ್ಷಣ ಉದ್ಯೋಗ ಮಾಹಿತಿ ಕೇಂದ್ರದ ನಿರ್ದೇಶಕ ಗಣೇಶ್ ಪ್ರಸಾದ್ ಪಾಣೂರು, ಉದ್ಯೋಗಾರ್ಥಿಯಾದ ಪುನೀತ್ ಕೃಷ್ಣ  ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಸಚಿವರಿಗೆ ೨೦೨೩ರಲ್ಲಿ ಮನವಿ ಸಲ್ಲಿಸಿ ಒತ್ತಾಯಿಸುತ್ತಿದ್ದರು. ಇದರಂತೆ ಈಗ ಸರಕಾರ ಆದೇಶ ಹೊರಡಿಸಿದ್ದು, ಟೈಪ್‌ರೈಟಿಂಗ್ ಮಲೆಯಾಳ ಕಡ್ಡಾಯ ಎಂಬುದನ್ನು ಹೊರತುಪಡಿಸಿದೆ. ಸೇವೆಗೆ ಸೇರಿ ನಾಲ್ಕು ವರ್ಷದೊಳಗೆ ಟೈಪ್‌ರೈಟಿಂಗ್ ಕೋರ್ಸ್ ಪಾಸಾದರೆ ಸಾಕು ಎಂಬ ನೂತನ ಆದೇಶದಿಂದ ಜಿಲ್ಲೆಯ ಕನ್ನಡಿಗರಿಗೆ ಅನುಕೂಲವಾಗಲಿದೆ ಎಂದು, ಕಾಸರಗೋಡು ಕನ್ನಡಿಗರು ಇದರ ಪ್ರಯೋಜನ ಪಡೆದುಕೊಳ್ಳಬಹುದೆಂದು ಗಣೇಶ್ ಪ್ರಸಾದ್ ತಿಳಿಸಿದ್ದಾರೆ.

RELATED NEWS

You cannot copy contents of this page