ವೀಣಾವಾದಿನಿಯಲ್ಲಿ ವಿದ್ಯಾದಶಮಿ ಸಂಗೀತೋತ್ಸವ
ಬದಿಯಡ್ಕ : ಇಡೀ ವರ್ಷದ ಶೈಕ್ಷಣಿಕ ಆರಾಧನೆಗೆ ವಿದ್ಯಾದಶಮಿಯು ಶಕ್ತಿಯಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಪುಸ್ತಕ, ಸಂಗೀತ, ವಾದ್ಯಪರಿಕರಗಳನ್ನು ದೇವರ ಎದುರು ಇರಿಸಿ, ಪೂಜಿಸಿ, ಶಿಕ್ಷಣಕ್ಕಾಗಿ ಬಳಸುವ ಸಂಪ್ರದಾಯವಿದೆ. ಇದನ್ನು ವಿದ್ಯಾರ್ಥಿಗಳು ಆರಾಧನಾ ರೂಪದಲ್ಲಿ ಸ್ವೀಕರಿಸಬೇಕು ಎಂದು ಬದಿಯಡ್ಕ ಸಮೀಪದ ಪುಳಿತ್ತಡಿಯ ನಾರಾಯ ಣೀಯಂ ಸಂಗೀತ ವಿದ್ಯಾಪೀಠಂನ ನಿರ್ದೇಶಕ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಹೇಳಿದರು. ಅವರು ಮಂಗಳವಾರ ಸಂಸ್ಥೆಯಲ್ಲಿ ನಡೆದ ಸಂಗೀತ ವಿದ್ಯಾರಂಭA ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಗೀತಗಾರರಿಗೆ ನವರಾತ್ರಿಯೇ ವರ್ಷಾರಂಭ. ಗುರುಗಳ ಮನಸ್ಸಿಗೆ ನೋವು ಮಾಡದಿರುವುದೇ ಬಹು ದೊಡ್ಡ ಗುರುದಕ್ಷಿಣೆ. ಯಾಕೆಂದರೆ ಅವರು ವಿದ್ಯಾರ್ಥಿಗಾಗಿ ಸರ್ವಸ್ವ ವನ್ನೂ ಧಾರೆ ಎರೆದಿರುತ್ತಾರೆ. ’ಗುರುತ್ವಂ’ ಎಂಬ ಶಬ್ಧಕ್ಕೆ ಪ್ರತಿ ವಿದ್ಯಾರ್ಥಿಯೂ ಗೌರವ ನೀಡಬೇಕು. ಎಂದು ಅವರು ಹೇಳಿದರು. ಕಾರ್ಯ ಕ್ರಮದಲ್ಲಿ ಮಾಧವನ್ ನಂಬೂದಿರಿ ಅವರನ್ನು ಅಭಿನಂದಿಸಲಾಯಿತು. ಸುಭಾಷ್ ಬೆಂಗಳೂರು, ಗಣೇಶ್ ಕಿನ್ನಿಗೋಳಿ ಉಪ್ಛನಿತರಿದ್ದರು. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತಾರ್ಚನೆ ಕಾರ್ಯಕ್ರಮ ನಡೆಯಿತು.