ವೀರನಗರ ಹೆಸರು ಬದಲಾವಣೆಗೆ ಯತ್ನ: ಹಿಂದೂ ಐಕ್ಯವೇದಿ ಖಂಡನೆ

ಬಂದ್ಯೋಡು: ಸ್ಥಳೀಯರು ಸ್ಥಾಪಿಸಿದ ನಾಮಫಲಕವನ್ನು ಮುಸ್ಲಿಂ ಲೀಗ್‌ನ ವಾರ್ಡ್ ಪ್ರತಿನಿಧಿಯ ಪತಿ ಸುಳ್ಳು ದೂರು ನೀಡಿ, ಪೊಲೀಸ್ ಅಧಿ ಕಾರಿಗಳನ್ನು ಸ್ವಾಧೀನಪಡಿಸಿಕೊಂಡು ತೆರವುಗೊಳಿಸಿದ ಘಟನೆಯನ್ನು ಹಿಂದೂ ಐಕ್ಯವೇದಿ ವೀರನಗರ ಸಮಿತಿ ಖಂಡಿ ಸಿದೆ. ಸುಮಾರು ೫೦ ವರ್ಷಗಳ ಹಿಂದೆ ಸ್ಥಾಪಿಸಿದ್ದ ವೀರನಗರ ಎಂಬ ನಾಮ ಫಲಕ ಶಿಥಿಲಗೊಂಡ ಕಾರಣ ಹೊಸತಾಗಿ ನಾಮಫಲಕವನ್ನು ಸ್ಥಾಪಿಸಲಾಗಿತ್ತು. ಆದರೆ ಈ ಸ್ಥಳದ ಹೆಸರನ್ನು ವಳಯಂಪಳ್ಳಿ ಎಂದು ಬದಲಿಸಲು ಯತ್ನಿಸುತ್ತಿರುವ ಕೆಲವರು ನಾಮಫಲಕವನ್ನು ತೆರವುಗೊಳಿಸಲು ಮುಂದಾಗಿದ್ದಾರೆಂದು ಹಿಂದೂ ಐಕ್ಯವೇದಿ ದೂರಿದೆ.

ವೀರನಗರ ಅಡ್ಕ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಪರಿಸರದಲ್ಲಿ ನಡೆದ ಹಿಂದೂ ಐಕ್ಯವೇದಿ ಸ್ಥಾನೀಯ ಸಮಿತಿ ರೂಪೀಕರಣ ಸಭೆಯನ್ನು  ಜಿಲ್ಲಾಧ್ಯಕ್ಷ ಎಸ್.ಪಿ. ಶಾಜಿ ಉದ್ಘಾಟಿಸಿದರು. ರಾಜ್ಯ ಅಧ್ಯಕ್ಷ ಆರ್.ವಿ. ಬಾಬು ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರ ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೀಪ್ ಗಟ್ಟಿ ದೇವಿನಗರ, ಜಿಲ್ಲಾ ಕಾರ್ಯದರ್ಶಿ ಸುಧಾಕರ, ಮಹಿಳಾ ಐಕ್ಯವೇದಿ ಜಿಲ್ಲಾಧ್ಯಕ್ಷೆ ವಸಂತಿಕೃಷ್ಣನ್ ಕುಂಬಳೆ, ಜಿಲ್ಲಾ ಕಾರ್ಯದರ್ಶಿ ಸುನಿತಾ ಟೀಚರ್ ಕುಂಬಳೆ ಉಪಸ್ಥಿತರಿದ್ದರು. ನೂತನ ಸ್ಥಾನೀಯ ಸಮಿತಿಯನ್ನು ತಾಲೂಕು ಅಧ್ಯಕ್ಷ ಸುರೇಶ್ ಶಾಂತಿಪಳ್ಳ ಘೋಷಿಸಿದರು. ಅಧ್ಯಕ್ಷಕಾಗಿ ಮಣಿ ವೀರನಗರ, ಉಪಾಧ್ಯಕ್ಷರಾಗಿ ಪ್ರವೀಣ್ ವೀರನಗರ, ವಿಜಯಲಕ್ಷ್ಮಿ ವೀರನಗರ, ಪ್ರಧಾನ ಕಾರ್ಯದರ್ಶಿಯಾಗಿ ಪ್ರೀತಂ ವೀರನಗರ, ಕಾರ್ಯದರ್ಶಿಯಾಗಿ ವಿತೇಶ್ ವೀರನಗರ, ಅಕ್ಷಯ್ ವೀರನಗರ, ಕೋಶಾಧಿಕಾರಿಯಾಗಿ ಗಣೇಶ್ ವೀರನಗರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಿರಿ, ಶಾಶ್ವತ್, ಶರತ್, ರಜಿನ್, ಧನ್ಯ ಕುಮಾರಿ, ಅಶ್ವಿನಿ, ಅಂಕಿತ್ ಆಯ್ಕೆಯಾದರು. ಗಿರಿ ವೀರನಗರ ಸ್ವಾಗತಿಸಿ, ಬಾಲಕೃಷ್ಣ ವಿ.ಎನ್. ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page